ರಾಯಚೂರು ತಾಲೂಕಿನ ಯರಗುಂಟಾ ಬಳಿ ನಿರ್ಮಾಣ ಹಂತದಲ್ಲಿರುವ ನಾರಾಯಣಪುರ ಬಲದಂಡೆ ಕಾಲುವೆ ಒಡೆದು ಜಮೀನುಗಳಿಗೆ ನೀರು ನುಗ್ಗಿರುವುದು. 
ಜಿಲ್ಲೆ

ನಾರಾಯಣಪುರ ಬಲದಂಡೆ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು

ರಾಯಚೂರು: ತಾಲೂಕಿನ ಯರಗುಂಟ ಬಳಿ ನಿರ್ಮಾಣ ಹಂತದಲ್ಲಿದ್ದ ನಾರಾಯಣಪುರ ಬಲದಂಡೆ ಕಾಲುವೆ ಮಳೆ ನೀರಿಗೆ ಒಡೆದು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿದ್ದರಿಂದ ಬೆಳೆ ಹಾನಿಗೊಳಗಾಗಿದೆ. ನಗರದಲ್ಲಿನ ರಸ್ತೆಗಳಲ್ಲಿಯೂ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ನಗರ ಸೇರಿ ತಾಲೂಕಿನಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಸಮಸ್ಯೆ ಎದುರಿಸಿದರು. ಜಮೀನುಗಳಿಗೆ ಹಳ್ಳದ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ನಗರದ ಸಿಯಾತಲಾಬ್, ಸುಖಾಣಿ ಕಾಲನಿ, ಎಲ್‌ಬಿಎಸ್ ನಗರ, ತಾಲೂಕಿನ ಬುರದಿಪಾಡ, ಡೊಂಗರಾಂಪುರ, ಜಾಲಿಬೆಂಚಿ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಜಾಗರಣೆ ಮಾಡುವಂತಾಗಿತ್ತು. ನಗರದ ಜೆಸ್ಕಾಂನ ಉಗ್ರಾಣದ ಸ್ಥಳಕ್ಕೆ ನೀರು ನುಗ್ಗಿ ಪರಿವರ್ತಕಗಳು ಹಾಳಾಗಿವೆ.