ನಾರಾಯಣಪುರ ಬಲದಂಡೆಯ ವಿತರಣಾ ಕಾಲುವೆ ಮತ್ತು ಹೊಲಗಾಲುವೆಗಳ ದುರಸ್ತಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ದೆಹಲಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಮನವಿ ಮಾಡಿದರು. 
ಜಿಲ್ಲೆ

ನಾರಾಯಣಪುರ ಬಲದಂಡೆಯ ವಿತರಣಾ ಕಾಲುವೆ ದುರಸ್ತಿಗೆ ಅನುದಾನ ಬಿಡುಗಡೆಗೆ ಮನವಿ

ಲಿಂಗಸುಗೂರು: ನಾರಾಯಣಪುರ ಬಲದಂಡೆಯ ವಿತರಣಾ ಕಾಲುವೆ ಮತ್ತು ಹೊಲಗಾಲುವೆಗಳ ದುರಸ್ತಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ದೆಹಲಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಮನವಿ ಸಲ್ಲಿಸಿದರು.

ಬಲದಂಡೆ ಮುಖ್ಯನಾಲೆ 0 ದಿಂದ 95 ಕಿಮೀ.ವರೆಗೆ ಆಧುನೀಕರಣ ಕಾಮಗಾರಿಗೆ 925 ಕೋಟಿ ರೂ. ಬಿಡುಗಡೆ ಮಾಡಿರುವುದು ಅಭಿನಂದನಾರ್ಹ ಕ್ರಮವಾಗಿದೆ. ಅದರಂತೆ ರೈತರ ಭೂಮಿಗೆ ಸಮರ್ಪಕ ನೀರು ತಲುಪಲು ಬಲದಂಡೆಯ ವಿತರಣಾ ಕಾಲುವೆ ಮತ್ತು ಹೊಲಗಾಲುವೆಗಳ ನವೀಕರಣಕ್ಕೆ 1200 ಕೋಟಿ ರೂ. ಅನುದಾನ ಬಿಡುಗಡೆ, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ರಾಯಚೂರು ಜಿಲ್ಲೆಗೆ ವಿಮಾನ ನಿಲ್ದಾಣ ಮಂಜೂರು ಮತ್ತು ಏಮ್ಸ್ ಕಾಲೇಜು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.