ಜಿಲ್ಲೆ

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಾತಿ, ಮತಭೇದಗಳಂತ ದೃಶ್ಯಗಳು ಹೆಚ್ಚಾಗಿದ್ದ ಕಾಲದಲ್ಲಿ ನಾರಾಯಣ ಗುರು ಎಂಬ ಸಾಮಾಜಿಕ ಸುಧಾರಕ ಉದಯಿಸಿದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಮಾತನಾಡಿದರು.

ಸಮಾಜದ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ ಸರ್ವಕಾಲೀಕವಾಗಿದೆ ಎಂದರು. ಒಂದೇಜಾತಿ, ಒಂದೇ ಮತ ಹಾಗೂ ಒಬ್ಬನೇ ದೇವರು ಎಂಬ ಸತ್ಯವಾಕ್ಯವನ್ನು ಸಾರಿದರು. ದೇಶಸೇವೆಯೇ ಈಶ ಸೇವೆ ಎಂದು ನಂಬಿ ಅದನ್ನೇ ಜಗತ್ತಿಗೆ ಸಾರಿದವರು ಎಂದು ಗುಣಗಾನ ಮಾಡಿದರು. ನಾರಾಯಣ ಗುರುಗಳು ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿದರು. ಜಾತಿ ಧರ್ಮ ಒಂದೇ ಎಂಬ ಸಿದ್ಧಾಂತದ ಮೂಲಕ ತಳ ಸಮುದಾಯದ ಹೆಣ್ಣುಗಳ ಶೋಷಣೆ, ಅಸಮಾನತೆಗಳ ವಿರುದ್ಧ ಹೋರಾಡಿದರು ಎಂದು ಸ್ಮರಿಸಿದರು.