ಹುಬ್ಬಳ್ಳಿ: ಅಯೋಧ್ಯಾಪತಿ ಶ್ರೀರಾಮಚಂದ್ರದೇವರ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಸಂವತ್ಸರ ಪರ್ಯಂತ ಶ್ರೀಮದ್ ರಾಮಾಯಣದ "ಉತ್ತರಕಾಂಡ ಕಥಾ ಪ್ರವಚನ' ಉಪನ್ಯಾಸವನ್ನು ಧಾರವಾಡ ತಾಲೂಕಿನ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅ. 25 ಹಾಗೂ 26ರಂದು ಸಂಜೆ 6ಕ್ಕೆ ವನಸಿರಿ ನಗರದಲ್ಲಿರುವ ಡಾ. ಶ್ರೀನಾಥ ಇವರ ನಿವಾಸದಲ್ಲಿ ಏರ್ಪಡಿಸಲಾಗಿದೆ.
ಪಂ. ಪೂರ್ಣಪ್ರಜ್ಞಾಚಾರ್ಯ ಮಳಗಿ ಅವರು ಉಪನ್ಯಾಸ ನೀಡುವರು. ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಗುರುಗಳ ಸದಸ್ಯರ ಪಾರಾಯಣಗಳು ನಡೆಯಲಿವೆ. ಭಕ್ತರು ಪಾಲ್ಗೊಳ್ಳಬೇಕೆಂದು ಬಳಗದ ಕಾರ್ಯದರ್ಶಿ ರಘೋತ್ತಮ ಅವಧಾನಿ ಕೋರಿದ್ದಾರೆ.