ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಸೆ.೧೮ ರಂದು ಅದ್ದೂರಿಯಾಗಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಸಮಾಜ ಮುಖಂಡರ ಜತೆಗಿನ ಸಭೆಯಲ್ಲಿ ಚರ್ಚಿಸಿ ಈ ಸಲ ನೂಲಿಯ್ಯ ಚಂದಯ್ಯ ಜಯಂತಿ ಹಾಗೂ ಬ್ರಹ್ಮಶ್ರೀ ನಾರಾಯಗುರು ಜಯಂತಿ ಆಗಸ್ಟ್ ೨೮ ರಂದು ನಡೆಯಬೇಕಾಗಿತ್ತು. ಎರಡು ಜಯಂತಿ ಒಟ್ಟಿಗೆ ಬಂದಿರುವುದರಿAದ ಸೆ.೧೮ ರಂದು ನಾರಾಯಣ ಗುರು ಜಯಂತಿ ಆಚರಿಸಲು ಸಭೆಯಲ್ಲಿ ಸಹಮತಕ್ಕೆ ಬರಲಾಯಿತು.
ಅಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಡಾ.ಎಸ್.ಎಂ. ಪಂಡಿತ್ ರಂಗಮAದಿರದಲ್ಲಿ ಸಮಾರಂಭ ಜರುಗಲಿದ್ದು, ಅಧಿಕಾರಿಗಳಿಗೆ ವಹಿಸಿಕೊಟ್ಟಿರುವ ಕೆಲಸಗಳನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೂಚಿಸಿದರು. ಪಂಡಿತರಿAದ ಉಪನ್ಯಾಸ ಕೊಡಿಸಬೇಕು. ಅಲ್ಲದೆ ಸಮಿತಿಗೆ ಅಧ್ಯಕ್ಷರನ್ನು ನೇಮಿಸಬೇಕು ಎಂದು ತಿಳಿಸಿದರು.
ಜಯಂತಿಯನ್ನು ಸರ್ಕಾರಿ, ಅರೆ ಸÀರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ . ತಾಲೂಕು ಕಚೇರಿಗಳಲ್ಲಿ ಬೆಳಿಗ್ಗೆ ೯ ಗಂಟೆ ಜಯಂತಿಯನ್ನು ಆಚರಿಸಲು ಎಡಿಸಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಮಾತನಾಡಿ, ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ವೇದಿಕೆ ಅಲಂಕಾರ ಮಾಡಲಾಗುವುದು ಆಮಂತ್ರಣ ಪತ್ರಗಳು ಮುದ್ರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಅಶೋಕ ಗುತ್ತೇದಾರ, ರಾಜೇಶ ಗುತ್ತೇದಾರ, ಅಂಬಯ್ಯ ಗುತ್ತೇದಾರ, ಕಾಶೀನಾಥ ಗುತ್ತೇದಾರ, ಮಹೇಶ ಗುತ್ತೇದಾರ, ಬಿ.ಎಂ. ರಾವೂರ, ಮಹೇಶ ಗುತ್ತೇದಾರ ತೇಲಗಾಂವ, ಹಣಮಯ್ಯ ಆಲೂರ ಅಂಗಡಿ, ವೆಂಕಟೇಶ ಗುತ್ತೇದಾರ ಮೊದಲಾದವರು ಪಾಲ್ಗೊಂಡಿದ್ದರು.
==