ಜಿಲ್ಲೆ

ದೈವಿಕ ವಾಸ್ತುಶಿಲ್ಪಿ ವಿಶ್ವಕರ್ಮರು

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ನರಗುಂದ: ವಿಶ್ವಕರ್ಮರು ಶ್ರೇಷ್ಠ ಕುಶಲಕರ್ವಿು ಹಾಗೂ ದೈವಿಕ ವಾಸ್ತುಶಿಲ್ಪಿಗಳಾಗಿದ್ದಾರೆ. ನಿಸ್ವಾರ್ಥ ಜೀವಿಗಳಾಗಿರುವ ಅವರೇ ಜಗತ್ತಿನ ಮೊದಲ ಇಂಜಿನಿಯರ್. ಎಲ್ಲ ಕಲೆಗಳನ್ನು ವಿಶ್ವಕರ್ಮರು ಕರಗತ ಮಾಡಿಕೊಂಡಿರುವ ಸಕಲ ವಿದ್ಯಾ ಪಾರಂಗತರು ಎಂದು ಶಿರೋಳ ಗವಿಮಠದ ಅಭಿನವ ಶ್ರೀ ಯಚ್ಚರ ಸ್ವಾಮೀಜಿ ಹೇಳಿದರು.

ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿಧೋದ್ದೇಶಗಳ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಹೊಳೆಆಲೂರಿನ ರಥ ಶಿಲ್ಪಿ ಪಾಂಡುರಂಗ ಬಡಿಗೇರ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ. ವಿಶ್ವಕರ್ಮರ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಿಳಿಸುವ ಕೆಲಸವಾಗಬೇಕು ಎಂದರು.

ಡಾ. ಗುರುಬಸವ ದೇವರು, ಸಂಪನ್ಮೂಲ ವ್ಯಕ್ತಿ ಎಸ್.ಬಿ. ಶಿವಳ್ಳಿ, ನಿವೃತ್ತ ಶಿಕ್ಷಕ ಎಸ್.ಬಿ. ದಂಡಿನ, ಎಸ್.ಬಿ. ಪಾಟೀಲ, ಪ್ರಾಚಾರ್ಯ ಬಿ.ಎಸ್. ಸಾಲಿಮಠ, ಮುಖ್ಯ ಶಿಕ್ಷಕ ಈರಪ್ಪ ಸೋನಾರ, ಪಾಂಡುರಂಗ ಬಡಿಗೇರ, ಶಿವಪ್ಪ ಬೋಳಶೆಟ್ಟಿ ಇದ್ದರು. ಪೊ›. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು.