ಜಿಲ್ಲೆ

ದೈವಿ ಶಕ್ತಿಯೊಂದಿಗೆ ಜಯ ಗಳಿಸಲು ಸಾಧ್ಯ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ನರಗುಂದ: ಸಿಂಧನೂರ ತಾಲೂಕಿನ ಸೋಮಲಾಪುರದ ಅಂಬಾ ಪರ್ವತಕ್ಕೆ ಸತತ 14 ವರ್ಷಗಳಿಂದ ಸದ್ಭಕ್ತರಿಗೆ ಉಚಿತವಾಗಿ ದೇವಿ ದರ್ಶನದ ಸೇವೆ ಮಾಡುತ್ತಿರುವ ನರಗುಂದ ಗಣೂಬಾಸಾಧು ಅಜ್ಜನಮಠದ ಶ್ರೀ ಈಶ್ವರಯ್ಯ ಹಿರೇಮಠ ಅವರನ್ನು ರೋಣ ಸಿದ್ಧಾರೂಢರ ಮಠದಲ್ಲಿ ಇತ್ತೀಚೆಗೆ ಸತ್ಕರಿಸಲಾಯಿತು.

ರೋಣ ಸಿದ್ಧಾರೂಢಮಠದಲ್ಲಿ ಧರ್ಮದರ್ಶಿ ಲಕ್ಷ್ಮಣ ಕಮ್ಮಾರ ಸಾನ್ನಿಧ್ಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಈಶ್ವರಯ್ಯ ಹಿರೇಮಠ ಶಾಸ್ತ್ರಿಗಳು, ದೈವಿ ಶಕ್ತಿಯೊಂದಿಗೆ ಈ ಜಗ ಜಯಿಸಲು ಸಾಧ್ಯವಿದೆ. ಭಕ್ತರು ಇದರ ಮಹತ್ವ ಅರಿತು ಜೀವನದಲ್ಲಿ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು. ಊಟ, ವಸತಿ ಮತ್ತು ಸಾರಿಗೆ ವೆಚ್ಚವನ್ನು ಸ್ವಂತ ಖರ್ಚಿನಲ್ಲಿ ಭಕ್ತರನ್ನು ಇನ್ನೂ ಏಳು ವರ್ಷ ಈ ಮಹತ್ಕಾರ್ಯಕ್ಕೆ ನಾನು ಸಿದ್ಧವಾಗಿದ್ದು, ಭಕ್ತರನ್ನು ಕರೆದುಕೊಂಡು ಅಂಬಾ ಪರ್ವತದಲ್ಲಿ ದೇವಿ ದರ್ಶನ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು.