ನರಗುಂದ: ಬೈಕ್ಗೆ ಅಪರಿಚಿತ ಲಾರಿ ಡಿಕ್ಕಿ ಹೊಡೆದ್ದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಸರ್ವಜ್ಞ ವರ್ತಲದ ಬಳಿ ಭಾನುವಾರ ರಾತ್ರಿ 7.30ರ ಸುಮಾರಿಗೆ ನಡೆದಿದೆ. ತಾಲೂಕಿನ ಭೈರನಹಟ್ಟಿ ಗ್ರಾಮದ ಅಜ್ಜಪ್ಪ ಮೊರಬದ (42) ಮೃತಪಟ್ಟ ಬೈಕ್ ಸವಾರ. ಬಸವರಾಜ ತೆಗ್ಗಿನಮನಿ ಗಂಭೀರವಾಗಿ ಗಾಯಗೊಂಡಿದ್ದು ನರಗುಂದದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಸವಾರರಿಬ್ಬರೂ ಧಾರಾಕಾರ ಮಳೆಯ ನಡುವೆಯೇ ನರಗುಂದದಿಂದ ಭೈರನಹಟ್ಟಿಗೆ ತೆರಳುತ್ತಿದ್ದ ವಳೆ ಅವಘಡ ಸಂಭವಿಸಿದೆ. ಗಾಯಾಳು ಬಸವರಾಜ ತೆಗ್ಗಿನಮನಿ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.