ಹುಬ್ಬಳ್ಳಿ: ಬೆಂಗಳೂರಿನಲ್ಲಿ ಎಫ್ಕೆಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ನಂದು ಕೆಮಿಕಲ್ಸ್ ಇಂಡಸ್ಟ್ರೀಸ್ ಉತ್ತಮ ಜಿಲ್ಲಾ ರಫ್ತು ಶ್ರೇಷ್ಠತಾ ಪ್ರಶಸ್ತಿ ಪಡೆದಿದೆ. 4ನೇ ಬಾರಿ ಈ ಪ್ರಶಸ್ತಿಗೆ ಪಾತ್ರವಾಗಿದೆ.
ಕಂಪನಿಯ ಉಪಾಧ್ಯಕ್ಷೆ ಉಷಾ ಹೆಗಡೆ ಪ್ರಶಸ್ತಿ ಸ್ವೀಕರಿಸಿದರು.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಉತ್ಪಾದಕ ಘಟಕಗಳನ್ನು ಹೊಂದಿರುವ ನಂದು ಕೆಮಿಕಲ್ಸ್ ವಿಶ್ವದ 20 ರಾಷ್ಟ್ರಗಳಿಗೆ ಗುಣಮಟ್ಟದ ಜೀವ ರಕ್ಷಕ ಔಷಧ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಡಯಾಲಿಸಿಸ್, ಐವಿ ಸಲ್ಯೂಸನ್ಸ್ ಹಾಗೂ ಲಸಿಕೆಗಳಲ್ಲಿ ಬಳಕೆಯಾಗುವ ಸಕ್ರಿಯ ಔಷಧಿಯ ಪದಾರ್ಥಗಳ ಪ್ರಮುಖ ತಯಾರಕರಾಗಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೋವಿಶಿಲ್ಡ್ ಲಸಿಕೆಗೆ ಪ್ರಮುಖ ಘಟಕಾಂಶವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 1978ರಲ್ಲಿ ರಾಮನಂದನ ಹೆಗಡೆ ಈ ಕಂಪನಿಯನ್ನು ಸ್ಥಾಪಿಸಿದ್ದರು.
ಧಾರವಾಡದ ಘಟಕದಲ್ಲಿ ಅತ್ಯುನ್ನತ ದರ್ಜೆಯ ಪ್ರಯೋಗಾಲಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಯೊಂದಿಗೆ ಮುಂದಿನ ದಿನಗಳಲ್ಲಿ ಉನ್ನತ ಸಾಧನೆ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು ಕಾರ್ಯನಿರ್ವಾಹಕ ಚೇರ್ಮನ್ ರಾಮನಂದನ ಹೆಗಡೆ ತಿಳಿಸಿದ್ದಾರೆ.