ಜಿಲ್ಲೆ

'ಸಾವಯವ ಕೃಷಿಕರೊಂದಿಗೆ ಸ್ವಾಮೀಜಿಯವರ ಸಂವಾದ'

Gadag - Shivanand Hiremath

ಗದಗ : ಕಪ್ಪತಗುಡ್ಡ ಉತ್ಸವ ೨೦೨೩ ರ ಅಂಗವಾಗಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ ಡೋಣಿ-ಗದಗ ರವರು ಕಪ್ಪತಗುಡ್ಡ ಪ್ರದಕ್ಷಿಣೆ ಕಾರ್ಯಕ್ರಮದ ಅಂಗವಾಗಿ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳ ೬೦ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿನೀಡಿ ಕಪ್ಪತಗುಡ್ಡದೊಂದಿಗೆ ಸಮುದಾಯದ ಭಾವಬಂಧ ಬೆಸೆಯುವ ಸಲುವಾಗಿ ಗ್ರಾಮಸ್ಥರೊಂದಿಗೆ, ವಿಶೇಷವಾಗಿ ಸಾವಯವ ಕ್ರಷಿಕರೊಂದಿಗೆ ಸಂವಾದ ನಡೆಸಿ ಪಾರಂಪರಿಕ ಕ್ರಷಿ, ಸಾವಯವ ಕ್ರಷಿ, ರಾಸಾಯನಿಕ ಮುಕ್ತ ಕೃಷಿಯತ್ತ ಮುಖಮಾಡುವಂತೆ ಸಮುದಾಯವನ್ನು ಸನ್ನದ್ಧಗೊಳಿಸುವ ಸತ್ಕಾರ್ಯದಲ್ಲಿ ಶ್ರೀಗಳು ತೊಡಗಿಕೊಂಡಿದ್ದು, ಈ ದ್ರಢವಾದ ಹೆಜ್ಜೆ ಮುಂದಿನ ದಿನಗಳಲ್ಲಿ ಸಮುದಾಯದಿಂದ ಉದ್ಭವಗೊಂಡು ಮಹಾ ಅಭಿಯಾನವಾಗಿ ಪರಿವರ್ತನೆಯಾಗಿ ಮಾನವನ ಮುಂದಿನ ಪೀಳಿಗೆಗೆ ಹಾಗೂ ಅಳಿವಿನಂಚಿಗೆ ಬಂದಿರುವ ಪಶು, ಪಕ್ಷಿ ಪ್ರಾಣಿಗಳ ಸಂರಕ್ಷಣೆಯು ಈ ಅಭಿಯಾನದ ಮೂಲ ಮಂತ್ರವಾಗಿದೆ.
ಸಾವಯವ ಕೃಷಿಕರೊಂದಿಗಿನ ಸಂವಾದದಲ್ಲಿ ಕ್ರಷಿಭೂಮಿಗೆ ಭೇಟಿ ನೀಡಿ ರೈತರು ತಾವು ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಧ್ಯಯನ ನಡೆಸಿ ಅವುಗಳನ್ನು ಮಾದರಿಯಾಗಿಟ್ಟುಕೊಂಡು ಇತರ ರೈತರು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದೂ ಸಹ ಈ ಸಾವಯವ ಸಂವಾದದ ಮತ್ತೊಂದು ಪ್ರಮುಖಗುರಿಗಳಲ್ಲೊಂದಾಗಿದೆಯೆAದು ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಂಸ್ಥಾನ ಮಠ ಡೋಣಿ-ಗದಗ ರವರ ಅಭಿಪ್ರಾಯವಾಗಿದೆ.
ಹರಿಪುರ ಗ್ರಾಮದ ಪ್ರಗತಿಪರ ಸಾವಯವ ರೈತ ಹಾಗೂ ಗೋ-ಸಾಕಾಣಿಕೆಯಲ್ಲಿ ತೊಡಗಿರುವ ಶುಭನಸಾಬ ಮಾಬುಸಾಬ ಒಂಟಿಯವರ ಕುಟುಂಬ ಸಾವಯವ ಕ್ರಷಿಕರಿಗೆ ಒಂದು ಮಾದರಿ ಕುಟುಂಬವಾಗಿದೆ, ಅವರು ಗೋ-ಕ್ರಪಾಮ್ರತ ತಯಾರಿಸಿ ಬಳಸಿ ವಿಷ ಮುಕ್ತ ಆಹಾರ ಬೆಳೆದಿರುವುದು ಸಾವಯವ ಕ್ರಷಿ ಲೋಕದಲ್ಲಿ ಒಂದ ಮೈಲುಗಲ್ಲಾಗಿದೆಯೆಂದು ತೋಟ ವೀಕ್ಷಣೆಗೆ ತೆರಳಿದ ಶ್ರೀಗಳು ನುಡಿದರು. ಇದೇ ಸಂದರ್ಭದಲ್ಲಿ ಶುಭನಸಾಬ ಮಾಬುಸಾಬ ಒಂಟಿ ಕುಟುಂಬದವರು ಶ್ರೀಗಳನ್ನು ಫಲ ಪುಷ್ಪ ನೀಡಿ ಸನ್ಮಾನಿಸಿದರು.