ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.  
ಜಿಲ್ಲೆ

ನಂದಿಕೂರು ಶಾಲೆ ಎಸ್‌ಡಿಎಂಸಿಗೆ ಪ್ರಶಸ್ತಿ

ಪಡುಬಿದ್ರಿ: ಸಮಗ್ರ ಶಿಕ್ಷಣ ಕರ್ನಾಟಕದಡಿ ನೀಡಲಾಗುವ ಸರ್ಕಾರಿ ಶಾಲೆಗಳ ಪುಷ್ಟಿ ಯೋಜನೆಯಡಿ ರಾಜ್ಯಮಟ್ಟದ ದಿ ಬೆಸ್ಟ್ ಎಸ್‌ಡಿಎಂಸಿ ಸ್ಕೂಲ್ ಪ್ರಶಸ್ತಿಗೆ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಆಯ್ಕೆಯಾಗಿದೆ.

ಆನ್‌ಲೈನ್ ಮೂಲಕ ರಾಜ್ಯದ 204 ಶೈಕ್ಷಣಿಕ ಬ್ಲಾಕ್‌ಗಳ 44,762 ಸರ್ಕಾರಿ ಶಾಲೆಗಳನ್ನು ಕ್ಲಸ್ಟರ್, ಬ್ಲಾಕ್, ಜಿಲ್ಲಾ ಹಂತಗಳ ವಿಶ್ಲೇಷಣೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಉಡುಪಿ ಜಿಲ್ಲೆ ಉಡುಪಿ ಶೈಕ್ಷಣಿಕ ವಲಯದ 72 ಸರ್ಕಾರಿ ಶಾಲೆಗಳಲ್ಲಿ ಮೊದಲಿಗೆ 16 ಕ್ಲಸ್ಟರ್ ಹಂತದ ಶಾಲೆಗಳಲ್ಲಿ ಆಯ್ಕೆಗೊಂಡು, ಬಳಿಕ ಬ್ಲಾಕ್ ಹಂತಕ್ಕೆ ಆಯ್ಕೆಯಾದ 9 ಶಾಲೆಗಳಲ್ಲಿ ಜಿಲ್ಲಾ ಹಂತಕ್ಕೆ ಆಯ್ಕೆಯಾದ 3 ಶಾಲೆಗಳಲ್ಲಿ ಒಂದೊಂದು ಬ್ಲಾಕ್‌ನಲ್ಲಿ ಒಂದೊಂದು ಶಾಲೆಯನ್ನು ಆಯ್ಕೆ ಮಾಡಲಾಗಿದೆ. ಉಡುಪಿ ವಲಯದಿಂದ ನಂದಿಕೂರು ಶಾಲೆ ಆಯ್ಕೆಯಾಗಿದೆ. ಪ್ರಶಸ್ತಿಯೊಂದಿಗೆ ಒಂದು ಲಕ್ಷ ರೂಪಾಯಿ ಅನುದಾನವನ್ನು ಶಾಲಾ ಅಭಿವೃದ್ಧಿಗೆ ಸರ್ಕಾರ ನೀಡಿದೆ ಎಂದು ಮುಖ್ಯ ಶಿಕ್ಷಕಿ ರಮಣಿ ತಿಳಿಸಿದ್ದಾರೆ.