ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಮಂಗಳೂರಿನಿಂದ ಆಗಮಿಸಿದ ನಂದಿ ರಥಕ್ಕೆ ಸ್ವಾಗತ ಕೋರಲಾಯಿತು. ಡಿ.ನರಸಿಂಹ, ಪಿ.ಆರ್.ಸುನಿಲ್‌ಕುಮಾರ್, ಬಿ.ಎಂ.ಸುರೇಶ್ ಇತರರು ಇದ್ದರು.  
ಜಿಲ್ಲೆ

ನಂದಿ ರಥಯಾತ್ರೆಗೆ ಸುಂಟಿಕೊಪ್ಪದಲ್ಲಿ ಸ್ವಾಗತ

ರವಿಕುಮಾರ್ ಪಿ. ಕೆ

ಸುಂಟಿಕೊಪ್ಪ: ಮಂಗಳೂರಿನಿಂದ ಆರಂಭಗೊಂಡಿರುವ ನಂದಿ ರಥಯಾತ್ರೆಗೆ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಮಂಗಳವಾರ ಕನ್ನಡ ವೃತ್ತಕ್ಕೆ ಆಗಮಿಸಿದ ನಂದಿ ರಥಯಾತ್ರೆಗೆ ಕೊಡಗು ಜಿಲ್ಲಾ ವಿಶ್ವ ಹಿಂದು ಪರಿಷತ್ ಮಾಜಿ ಕಾರ್ಯದರ್ಶಿ ಡಿ.ನರಸಿಂಹ ಹಾಗೂ ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ನಂತರ ಮೆರವಣಿಗೆಯೊಂದಿಗೆ ನಗರದ ಬೀದಿಗಳಲ್ಲಿ ಸಾಗಿ ಶ್ರೀ ಪುರಂ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಅಲ್ಲಿಂದ ಕುಶಾಲನಗರ ಕಡೆಗೆ ಬೀಳ್ಕೊಡಲಾಯಿತು.

ಗ್ರಾಮ ಪಂಚಾಯಿತಿ ಬಿ.ಎಂ.ಸುರೇಶ್, ಶಕ್ತಿ ಕೇಂದ್ರದ ಅಧ್ಯಕ್ಷ ಧನು ಕಾವೇರಪ್ಪ, ಸಹದೇವ, ಹರೀಶ್, ಬಿ.ಎಸ್.ಆನಂದ, ವಾಸು, ಮುರಳೀಧರ್ ಕಾಮತ್, ಶಾಂತಿ ನಂಜುಂಡ ಸೇರಿದಂತೆ ಮತ್ತಿತರರು ಇದ್ದರು.