ಜಿಲ್ಲೆ

ನಂದಿ ಗೋ ರಥಯಾತ್ರೆ ಆಗಮನ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಗೋ ಸೇವಾ ಗತಿವಿಧಿ ಹಾಗೂ ರಾಧಾ ಸುರಭಿ ಗೋಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್​ ವತಿಯಿಂದ ಏರ್ಪಡಿಸಿರುವ "ನಂದಿ ಗೋ ರಥಯಾತ್ರೆ' ಫೆ. 9ರಂದು ಬೆಳಗ್ಗೆ ಅಮ್ಮಿನಭಾವಿ ಗ್ರಾಮದಿಂದ ಧಾರವಾಡಕ್ಕೆ ಪ್ರವೇಶಿಸಲಿದೆ.

ಅಂದು ಬೆಳಗ್ಗೆ 10 ಗಂಟೆಗೆ ಶ್ರೀ ಮುರುಘಾಮಠದಲ್ಲಿ ರಥಯಾತ್ರೆಗೆ ಸ್ವಾಗತ ನೀಡಲಾಗುವುದು. ನಂತರ ವಿವಿಧ ಪ್ರದೇಶಗಳ ಮೂಲಕ 11.30ಕ್ಕೆ ದುರ್ಗಾದೇವಿ ದೇವಸ್ಥಾನ ಬಳಿಯ ಶ್ರೀ ಸರಸ್ವತಿ ನಿಕೇತನಕ್ಕೆ ತಲುಪಲಿದೆ. ನಂತರ ಏರ್ಪಡಿಸಿರುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಡಾ. ಹನುಮಂತ್​ ಮಳಲಿ, ಸಂಯೋಜಕ ಸುನೀಲ ಸರೂರ ಪಾಲ್ಗೊಳ್ಳುವರು.

ಈ ಗೋ ರಥಯಾತ್ರೆಯು ಪುರಾತನ ಸಂಸ್ಕೃತಿಯನ್ನು ಪುನಃ ಜೀವಂತಗೊಳಿಸುವ ಒಂದು ಮಹತ್ವದ ಹಂತವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಗೋವು ಕೇವಲ ಪಶುವಲ್ಲ. ಅದು ಲಕ್ಷ್ಮೀ ರೂಪ. ಈ ಧಾರ್ಮಿಕ ಮತ್ತು ಸಾಮಾಜಿಕ ಅಭಿಯಾನದಲ್ಲಿ ಧಾರವಾಡ ಹಾಗೂ ಸುತ್ತ ಮುತ್ತಲಿನ ಜನರು, ರೈತರು, ಭಾಗವಹಿಸಬೇಕು ಎಂದು ಸಂಯೋಜಕ ಸುನೀಲ ಸರೂರ ತಿಳಿಸಿದ್ದಾರೆ.