ವಿಜಯವಾಣಿ ಸುದ್ದಿಜಾಲ ನಂದಗುಡಿ
ವಿದ್ಯೆ ಎಂಬ ಸಂಪತ್ತನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಪಾಲಕರು ಹಾಗೂ ಶಿಕ್ಷಕರ ಜವಾಬ್ದಾರಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಂದಗುಡಿಯ ಕೆಪಿಎಸ್ ಸ್ಕೂಲ್ ಆವರಣದಲ್ಲಿ ಆರ್‌ಎಡಿಎಫ್ ಅನುದಾನ 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸುವುದು ಪಾಲಕರ ಜವಾಬ್ದಾರಿ. ಪಾಲಕರು ಇದನ್ನು ಅರ್ಥೈಸಿಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಸುಶಿಕ್ಷಿತರನ್ನಾಗಿಸಿ, ಸಮಾಜದ ಆಸ್ತಿಯನ್ನಾಗಿಸಬೇಕು ಎಂದರು.
ಕನ್ನಡ ಶಾಲೆಗಳಲ್ಲಿ ಅಧ್ಯಯನ ಮಾಡಿದ ಅನೇಕರು ವಿಶೇಷ ಸಾಧನೆ ಮಾಡಿ ಪ್ರಖ್ಯಾತಿ ಪಡೆದಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಪೈಪೋಟಿ ನೀಡಲು ಶ್ರದ್ಧೆಯಿಂದ, ಅಧ್ಯಯನ ಮಾಡುವ ಮೂಲಕ ಸಾಧನೆ ಮಾಡಬೇಕು ಎಂದರು.
ಇನೋಟೇಡ್ ಕಂಪನಿ ನಿರ್ಮಿಸಿಕೊಟ್ಟ ಹೈಟೆಕ್ ಶೌಚಗೃಹವನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಶಾಲಾಭಿವೃದ್ಧಿಗೆ ಶ್ರಮಿಸಿದ ಗಣ್ಯರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಎಸ್‌ಎಫ್‌ಸಿಎಸ್ ಅಧ್ಯಕ್ಷ ಎಸ್. ಮಂಜುನಾಥ್, ದಾನಿಗಳಾದ ಕಲ್ಕೆರೆ ಕೆ.ಎಸ್. ಮಹದೇವಯ್ಯ, ಎಂ. ಮಂದೀಪ್‌ಗೌಡ, ಗ್ರಾಪಂ ಅಧ್ಯಕ್ಷೆ ಮಂಜುಳಾ ನಾಗೇಶ್, ಉಪಾಧ್ಯಕ್ಷೆ ಗಾಯತ್ರಿ ನಾಗೇಶ್, ಸದಸ್ಯರಾದ ವೀರರಾಜ್, ಎನ್.ಎನ್.ಮಂಜುನಾಥ್, ತಮ್ಮಣ್ಣಗೌಡ, ಚಂದಪ್ಪ, ಕಮಲಾ ಶಿವು, ಮುನಿವೆಂಕಟಮ್ಮಬಚ್ಚಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಗಂಗಾಧರ್, ಪ್ರಾಂಶುಪಾಲ ಸಿದ್ದರಾಮಯ್ಯ ಇತರರು ಇದ್ದರು. ದ್ದರು.