ವಿಜಯವಾಣಿ ಸುದ್ದಿಜಾಲ ನಂದಗುಡಿ
ರೈತ ಕುಟುಂಬಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಸತತ ರೈತರ ಸೇವೆಯಲ್ಲಿ ತೊಡಗಿರುವ ನಮ್ಮ ಬ್ಯಾಂಕ್ ಲಾಭ ಗಳಿಸುವುದರಲ್ಲಿ ಮುಂದಿದೆ ಎಂದು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಹೇಳಿದರು.
ಹೋಬಳಿಯ ನೆಲವಾಗಿಲಲ್ಲಿ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ ಮಾತನಾಡಿ, ಸಹಕಾರ ಸಂಘಗಳು ರಾಜಕೀಯ ಹಸ್ತಕ್ಷೇಪ, ಪಕ್ಷಪಾತದಿಂದ ಮುಕ್ತವಾದಾಗ ಸದಸ್ಯರ ಹಿತ ಕಾಪಾಡಲು ಸಾಧ್ಯ. ಸಂಘವು ವ್ಯಾಪಾರ ವಹಿವಾಟು ನಡೆಸಿ, ಲಾಭ ಗಳಿಸಲು ಸೀಮಿತಗೊಳ್ಳದೆ, ಸದಸ್ಯರ ಮಕ್ಕಳ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಹೊಸಕೋಟೆ ಟಿಎಪಿಸಿಎಂಸಿ ನಿರ್ದೇಶಕ ಎನ್.ಡಿ.ರಮೇಶ್ ಮಾತನಾಡಿ, ಕೃಷಿಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸಂಘಗಳು ಮುಖ್ಯ ಪಾತ್ರ ವಹಿಸುತ್ತವೆ. ರೈತರು ಆರ್ಥಿಕವಾಗಿ ಸಬಲರಾಗಲು ನಿರಂತರ ಸೇವೆ ಸಲ್ಲಿಸುತ್ತಿವೆ. ಈ ಬಾರಿ ಷೇರುದಾರರ ಪ್ರತಿಭಾವಂತ ಮಕ್ಕಳಲ್ಲಿ 50 ಮಂದಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುತ್ತಿದೆ ಎಂದರು.
ಸಂಘದ ಸಿಇಒ ಎಚ್.ಎಂ.ಗುರುದೇವ್ ಮಾತನಾಡಿ, ರೈತರು ಸಾಲ ತೆಗೆದುಕೊಂಡು ಸಕಾಲಕ್ಕೆ ಮರು ಪಾವತಿಸಿದ್ದು, 26.15 ಲಕ್ಷ ರೂ. ನಿವ್ವಳ ಲಾಭ ಬಂದಿದೆ. 745 ಸದಸ್ಯರಿಗೆ 574,08 ಕೋಟಿ ರೂ. ಸಾಲ ನೀಡಿದೆ. 156 ಸದಸ್ಯರಿಗೆ 130,30 ಕೋಟಿ ಚಿನ್ನಾಭರಣ ಸಾಲ, 121 ಸದಸ್ಯರಿಂದ 200,00 ಕೋಟಿ ರೂ. ಠೇವಣಿ ಸಂಗ್ರಹಿಸಿದೆ.
ನಿರ್ದೇಶಕರಾದ ಎಚ್.ಕೆ.ನಾರಾಯಣಗೌಡ, ಎಂ.ಡಿ.ರಮೇಶ್, ಎನ್.ಮಂಜುನಾಥ್, ರವಿಶಂಕರ್, ಕೆ.ಮಂಜುನಾಥ್, ಜಯಮ್ಮ ಶ್ರೀ ಲಕ್ಷ್ಮೀದೇವಿ, ಟಿ.ಮುನಿರಾಜು, ಎ.ಆರ್.ಕೃಷ್ಣಪ್ಪ, ಮಾಜಿ ತಾಪಂ ಸದಸ್ಯ ಆರ್.ಬೀರಪ್ಪ, ಮಾಜಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ವಿಜಯದೇವ್, ಮುನಿಚನ್ನಪ್ಪ, ಎಸ್.ಬಿ.ಟಿ. ಬೈರೇಗೌಡ, ಎಚ್.ಎಸ್.ನಾರಾಯಣಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎನ್. ಧರ್ಮೇಶ್, ಎಂಪಿಸಿಎಸ್ ಅಧ್ಯಕ್ಷ ಪ್ರಕಾಶ್ ಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಸೊಣ್ಣೆಗೌಡ, ಸಂಘದ ಲೆಕ್ಕ ಪಾಲಕ ಎಸ್.ನಾಗೇಶ್, ಹಿರಿಯ ಮಾರಾಟ ಗುಮಸ್ತ ಎನ್.ಅಶೋಕ್ ಇದ್ದರು.