ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಪತ್ರಕರ್ತರು ಸಮಾಜದ ಆಗು-ಹೋಗುಗಳನ್ನು ಮನಮುಟ್ಟುವಂತೆ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡುವ ಮೂಲಕ ಸಾಮಾಜಿಕ ಅರಿವು ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ಕೆಂಪೇಗೌಡ ಕಿಡ್ನಿ ೌಂಡೇಷನ್ ನಿರ್ದೇಶಕ ಡಾ.ಆಂಜಿನಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದಿಂದ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ರಾಜ್ಯ ನಿರ್ದೇಶಕ ಟಿ.ನಾಗರಾಜ್ ಮಾತನಾಡಿ, ಸಾಮಾಜಿಕ ಕಳಕಳಿ ಮೆರೆಯುವ ಪತ್ರಕರ್ತರ ವೃತ್ತಿಯಲ್ಲಿ ಇಂದಿಗೂ ಸಮಾಜ ಘಾತುಕ ಶಕ್ತಿಗಳ ಬೆದರಿಕೆ ಎದುರಿಸುವ ಸ್ಥಿತಿ ಇದ್ದು, ಅದ್ಯಾವುದನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ ಕೆಲಸ ಮಾಡಲಾಗುತ್ತಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಸಂವಿಧಾನದ 4ನೇ ಅಂಗವಾಗಿ ಸಾಮಾಜಿಕ ಕಳಕಳಿ ಹೊಂದಿರುವ ಪತ್ರಿಕಾ ರಂಗ ಸಮಾಜ ತಿದ್ದುವ ಕಾರ್ಯ ಮಾಡುತ್ತಿದೆ ಎಂದರು.