ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಅಸಂಖ್ಯಾತ ಗೋವುಗಳನ್ನು ಗೋಶಾಲೆಯಲ್ಲಿ ಇಟ್ಟುಕೊಂಡು ಸಾಕುವುದು ಸುಲಭದ ಕೆಲಸವಲ್ಲ. ಇಲ್ಲಿರುವ ಎಲ್ಲರ ಸಹಕಾರದಿಂದ ಕಳೆಂಜದಲ್ಲಿರುವ ಈ ಗೋಶಾಲೆ ಒಳ್ಳೆಯ ರೀತಿಯಿಂದ ನಡೆಯುತ್ತಿದ್ದು, ಮುಂದಕ್ಕೆ ಎಲ್ಲರನ್ನು ಆಕರ್ಷಿಸುವ ಈ ಪರಿಸರ ಪ್ರವಾಸೋದ್ಯಮ ತಾಣವಾಗಿ ಬೆಳೆಯಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶುಭ ಹಾರೈಸಿದರು .
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ನಂದಗೋಕುಲ ಗೋಶಾಲೆಯಲ್ಲಿ ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ವತಿಯಿಂದ ನಡೆದ ‘ಪುಣ್ಯಕೋಟಿಗೆ ಒಂದು ಕೋಟಿ’ ನಂದಗೋಕುಲ ದೀಪೋತ್ಸವ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ದೀಪೋತ್ಸವ ಸಮಿತಿ ಗೌರವ ಸಲಹೆಗಾರ ಶಾಸಕ ಹರೀಶ್ ಪೂಂಜ, ಉಜಿರೆ ಎಸ್.ಡಿ.ಎಂ. ಸೊಸೈಟಿ ಸಿಇಒ ಪೂರನ್ ವರ್ಮಾ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪುತ್ತೂರು ಆರೆಸ್ಸೆಸ್ ಜಿಲ್ಲಾ ಸಂಚಾಲಕ ವಿನಯಚಂದ್ರ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಕೃಷ್ಣ ಭಟ್, ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ಅನಿತಾ, ನಂದಗೋಕುಲ ದೀಪೋತ್ಸವ ಸಮಿತಿ ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ, ದೀಪೋತ್ಸವ ಸಂಚಾಲನಾ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಪಂಚಶ್ರೀ, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್ ಭಜನೋತ್ಸವ ಉದ್ಘಾಟಿಸಿದರು. ಭಾಸ್ಕರ್ ಧರ್ಮಸ್ಥಳ, ಪದ್ಮನಾಭ ಶೆಟ್ಟಿಗಾರ್ ಉಜಿರೆ, ನವೀನ್ ನೆರಿಯ, ಸೀತಾರಾಮ ಬೆಳಾಲು ಉಪಸ್ಥಿತರಿದ್ದರು. ಶಿಕ್ಷಕಿ ವಸಂತಿ ಪ್ರಾರ್ಥಿಸಿದರು. ಡಾ.ಎಂ.ಎಂ.ದಯಾಕರ್ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಂದಿಸಿದ್ದರು. ಆದಿತ್ಯ ಜೆ.ಶೆಟ್ಟಿ ಬರೆಂಗಾಯ ನಿರೂಪಿಸಿದರು. ಸಾಮೂಹಿಕ ಗೋಪೂಜೆ, ಗೋ ನಂದಾರತಿ ಮತ್ತು ದೀಪೋತ್ಸವ ಜರುಗಿತು.
ಶಾಸಕಿ ಭಾಗೀರಥಿ ಮುರುಳ್ಯ, ನಾರಾಯಣ ಗೌಡ, ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಅವರನ್ನು ಸನ್ಮಾನಿಸಲಾಯಿತು. ದೀಪೋತ್ಸವಕ್ಕೆ ಗೂಡು ದೀಪ ಒದಗಿಸಿದ ಪದ್ಮನಾಭ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ತನ್ನ ಗೌರವ ಧನ 43000 ರೂ. ಗೋಶಾಲೆಗೆ ಸಮರ್ಪಿಸಿದರು.
ಈ ಜಾಗವನ್ನು ಗೋಪಾಲಕೃಷ್ಣ ನಾಯರ್ ಟ್ರಸ್ಟ್‌ಗೆ ದಾನ ನೀಡಿದಾಗಿನಿಂದ ಪ್ರಾರಂಭವಾಗಿ ಗೋ ಶಾಲೆ ಇಲ್ಲಿಯವರೆಗೆ ಬೆಳೆಯುತ್ತಲೇ ಇದೆ. ಶಶಿಧರ ಶೆಟ್ಟಿ ಬರೋಡ ಅವರ ಕಲ್ಪನೆ ಪುಣ್ಯಕೋಟಿಗೆ ಒಂದು ಕೋಟಿ ಗೋಶಾಲೆಗೆ ಉತ್ತಮ ಆರ್ಥಿಕ ಬಲ ಬಂದಂತಾಗಿದೆ. - ಹರೀಶ್ ಪೂಂಜ, ಶಾಸಕ