ಜಿಲ್ಲೆ

ವರ್ಣಗಳಲ್ಲಿ 'ನಮ್ಮೂರು' ಪ್ರತಿಬಿಂಬ...

ಮಣಿಪಾಲದಲ್ಲಿ ಮೂರು ದಿನ ಕಲಾ ಪ್ರದರ್ಶನ

ತ್ರಿವರ್ಣ ವಿದ್ಯಾರ್ಥಿಗಳಿಂದ ಸಂಸ್ಕೃತಿಯ ಅನಾವರಣ

ಪ್ರಶಾಂತ ಭಾಗ್ವತ ಉಡುಪಿ

ಕಲೆ ಯಾರೊಬ್ಬರ ಸ್ವತ್ತಲ್ಲ. ಆದರೆ, ಎಲ್ಲರಿಗೂ ಸುಲಭವಾಗಿ ಒಲಿಯುವುದೂ ಇಲ್ಲ. ಅನೇಕರಿಗೆ ಅದು ರಕ್ತಗತವಾಗಿದ್ದರೆ, ಬಹಳ ಮಂದಿಗದು ಶ್ರಮಲದ ಸಿದ್ಧಿ. ಅಂತಹ ಕೈಚಳಕದ ಚಿತ್ರಕಲೆಯನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ.

ಮಣಿಪಾಲದಲ್ಲಿರುವ ತ್ರಿವರ್ಣ ಆರ್ಟ್​ ಕ್ಲಾಸ್​ನ 7ರಿಂದ 18 ವರ್ಷದೊಳಗಿನ (ಕಿರಿಯರ ವಿಭಾಗ) ಆಯ್ದ 32 ವಿದ್ಯಾರ್ಥಿಗಳು ನಮ್ಮೂರು ಚಿತ್ರಿಸಿದ್ದಾರೆ. ನೋಡುಗರಿಗೆ ಊರಿನ ಸಂಸ್ಕೃತಿ ಪ್ರತಿಬಿಂಬಿಸಲು ಅಣಿಯಾಗಿದ್ದಾರೆ.

ಮೂರು ದಿನ ಪ್ರದರ್ಶನ

ನಮ್ಮ ಪರಿಸರದ ಅವಿಸ್ಮರಣೀಯ ಸ್ಥಳ ಮತ್ತು ಮಣ್ಣಿನ ಸಾರ ಅರ್ಥೈಸಲು ಮಕ್ಕಳು ಚಿತ್ರಿಸಿದ್ದಾರೆ. ಮಣಿಪಾಲದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಸೆ.5ರಿಂದ 7ರ ವರೆಗೆ ಅವರ ಕಲೆ ಪ್ರದರ್ಶಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಗೆ ಮಣಿಪಾಲ ಜ್ಞಾನಸುಧಾ ಪಿಯು ಕಾಲೇಜಿನ ಪ್ರಾಂಶುಪಾಲ ಗಣೇಶ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಕಿರಣ ಮಂಜನಬೈಲು, ಮಣಿಪಾಲ ಕಲಾಸ್ಪಂದನದ ನಿರ್ದೇಶಕಿ ವಿದುಷಿ ಪವನಾ ಬಿ. ಆಚಾರ್​, ಮಣಿಪಾಲ ರೋಟರಿ ಕ್ಲಬ್​ ಅಧ್ಯಕ್ಷೆ ರೊ.ಶಶಿಕಲಾ ರಾಜವರ್ಮ ಅವರು 3 ದಿನದ ಕಲಾಪ್ರದರ್ಶನಕ್ಕೆ

ಚಾಲನೆ ನೀಡಲಿದ್ದಾರೆ.

32 ವಿದ್ಯಾರ್ಥಿಗಳಿಂದ ಚಿತ್ರ ರಚನೆ

ತ್ರಿವರ್ಣ ವಿದ್ಯಾರ್ಥಿಗಳಾದ ಅಧಿರಾ ನಾಯರ್​ ಟಿ., ಅನ್ವಿತಾ, ಅಶುತೋಷ್​ ಎಂ. ನಾಯಕ, ಆತ್ರಾಡಿ ಕಾವ್ಯರಾಜ್​ ಹೆಗ್ಡೆ, ದಕ್ಷ್​ ಜೆ. ಶೆಟ್ಟಿ, ದೇವಾಂಗಣ ಎನ್​.ಆರ್​., ಗ್ರೀಷ್ಮಾ ಎಸ್​., ಹಿಮಾನಿ ಡಿ. ಶೆಟ್ಟಿ, ಜೋರ್ಡನ್​ ಕೋರ್ಡ್​, ಕೃತಿ ಕೆ. ದೇವಾಡಿಗ, ಜೆ.ಸುದೀಕ್ಷಾ, ನಮ್ರತಾ ಎನ್​.ಆರ್​., ಪ್ರಣತಿ ಬಿ. ಶೆಟ್ಟಿ, ಪ್ರತ್ವಿಜ್​ ಪಿ. ಶೆಟ್ಟಿ, ರಿದ್ದೀಶ್​ ಎಂ. ನಾಯಕ, ಸಾನ್ವಿ ನಾಯಕ, ಸಾನ್ವಿ ಪಾಲನ್​, ಸಾತ್ವಿಕ್​ ಡಿ. ಪ್ರಭು, ಸಧ್ವಿನ್​ ಡಿ. ಶೆಟ್ಟಿ, ಸಂಸ್ಕೃತಿ ಎಚ್​.ಎ., ಸಂಜನಾ ಎಸ್​. ಸಮಂತ್​, ಸಾರ್ಥಕ್​ ಎಸ್​., ಸಾತ್ವಿಕ್​ ಎಸ್​., ಶ್ರೇಯನ್​ ಪೂಜಾರಿ, ಸ್ಮೃತಿ ತುಂಗಾ ಪಿ., ಸ್ಪರ್ಶ್​ ಸುಕೇಶ್​ ಪೂಜಾರಿ, ಹರ್ಷಿಣಿ ಎಸ್​., ಶ್ರೀಲತಾ ಶೆಣೈ, ಸುಪರ್ಣಾ ಆರ್​. ಸುವರ್ಣ, ತೇಜಸ್​ ದೇವಾಡಿಗ, ವಿಹಾನ್​ ಆರ್​. ಶೇರಿಗಾರ್​, ವಿಜೇತಾ ಕೆ.ಎಸ್​. ನಮ್ಮೂರು ಚಿತ್ರಿಸಿದ್ದಾರೆ.

ಕಲೆಯಲ್ಲಿ ಹೊಮ್ಮಲಿದೆ ಮಣ್ಣಿನ ಪರಿಮಳ

ಕಲಾವಿದ, ಮಾರ್ಗದರ್ಶಕ ಹರೀಶ್​ ಸಾಗಾ ಮಾರ್ಗದರ್ಶನದಲ್ಲಿ ಮಕ್ಕಳು ಕಲೆಯಲ್ಲಿ ಮಣ್ಣಿನ ಪರಿಮಳ ಬೀರಲಿದ್ದಾರೆ. ಪ್ರದರ್ಶನದಲ್ಲಿ ತ್ರಿಶೂರ್​ ಟೆಂಪಲ್​, ಸನ್​ಸೆಟ್​, ಟೀ ಸ್ಟಾಲ್​, ಗೋಶಾಲಾ, ಪಂಜುರ್ಲಿ ಕೋಲ, ತೈಯಂ, ಟೀ ಎಸ್ಟೇಟ್​, ಕೆಸರಿನಾಟ, ಪ್ರೇಯರ್​, ಕಾಂತಾರ, ವೇಣುಗೋಪಾಲ, ನಿತ್ಯ ಪೂಜೆ, ಸಮುದ್ರ ಸ್ನಾನ, ಪಾಡ್ದನ, ಕಾಪು ಬೀಚ್​, ರಂಗೋಲಿ, ಅಷ್ಟಮಿ, ರಥೋತ್ಸವ, ಬಲಿ, ದೇವ ಬಿಂದಿಗೆ, ಜಾತ್ರೆ, ಗೂಡಂಗಡಿ, ಬಬ್ಬುಸ್ವಾಮಿ, ಸುರಾಪಾನ, ಗೊಂಬೆಯಾಟ, ಬಾಹುಬಲಿ, ಮಹಾಬಲೀಪುರಂ, ನಂದಾ ದೀಪ, ಭಜನೆ, ಆನೆಕೆರೆ, ರಥಬೀದಿ, ಡೊಳ್ಳು ಕುಣಿತಗಳ 18×18 ಇಂಚ್​ನ ಅಕ್ರಾಲಿಕ್​, ಕ್ಯಾನ್ವಾಸ್​, ಚಾಕೋರ್ಲ್​, ಮಿಶ್ರ ಮಾಧ್ಯಮ ಶೇಡಿಂಗ್ಸ್​ನ ಕಲಾಕೃತಿ ಅನಾವರಣಗೊಳ್ಳಲಿದೆ.
ತ್ರಿವರ್ಣ ಕ್ಲಾಸ್​ನಲ್ಲಿ 7ರಿಂದ 75 ವರ್ಷದವರೂ ಸಹ ಕಲಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ಪರಿಸರದ ಅವಿಸ್ಮರಣೀಯ ಸ್ಥಳ, ಮಣ್ಣಿನ ಸಾರ ಅರ್ಥೈಸುವುದು ಹಾಗೂ ಸಂಸ್ಕೃತಿ ಬಿಂಬಿಸುವುದು ನಮ್ಮೂರು ಪ್ರದರ್ಶನದ ವಿಶೇಷತೆ. ಕಲಾ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಲು ಸೆ.5ರಿಂದ 3 ದಿನ ಎಕ್ಸಿಬಿಷನ್​ ಏರ್ಪಡಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 7:30ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವಿದೆ. | ಹರೀಶ್​ ಸಾಗಾ. ತ್ರಿವರ್ಣ ಕಲಾ ಕೇಂದ್ರದ ಮಾರ್ಗದರ್ಶಕ