ಬೆಂಗಳೂರು: ಆಟೋ ಚಾಲಕರು ಒಂದಾಗಿ ರಚಿಸಿಕೊಂಡಿದ್ದ 'ನಮ್ಮ ಯಾತ್ರಿ' ಆ್ಯಪ್ ಏ.16ರಿಂದ ನಗರದಲ್ಲಿ ಕ್ಯಾಬ್ ಸೇವೆ ಆರಂಭಿಸಿದೆ.
ನಮ್ಮ ಯಾತ್ರಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಗಿಜನ್ ಸೆಲ್ವನ್ ಮಾತನಾಡಿ, ಅತ್ಯಾಧುನಿಕ ತಂತ್ರಾನದ ಮೂಲಕ ಚಾಲಕರನ್ನು ಸಬಲೀಕರಣಗೊಳಿಸಲು ಮುಂದಾಗಿದೆ. ಈಗಾಗಲೇ 25 ಸಾವಿರ ಕ್ಯಾಬ್ ಡೆವರ್ಗಳನ್ನು ಹೊಂದಿದ್ದು, ಮುಂದಿನ 5 ತಿಂಗಳಲ್ಲಿ 1 ಲಕ್ಕೂ ಹೆಚ್ಚು ಚಾಲಕರೊಂದಿಗೆ ಸಂಪರ್ಕ ಸಾಧಿಸಲಿದೆ. ವೇಗದ ಪಿಕಪ್, ಕಡಿಮೆ ರದ್ದತಿ, ಸ್ಪರ್ಧಾತ್ಮಕ ಬೆಲೆ ಹಾಗೂ ವಿಶ್ವಾಸಾರ್ಹ ಸೇವೆ ನೀಡಲು "ನಮ್ಮ ಯಾತ್ರಿ' ಬದ್ಧವಾಗಿದೆ. ನಾನ್ ಎಸಿ ಮಿನಿ, ಎಸಿ ಮಿನಿ, ಸೆಡಾನ್ ಮತ್ತು ಎಕ್ಸ್ಎಲ್ ಕ್ಯಾಬ್ ಸೇವೆ ಲಭ್ಯವಿದೆ ಎಂದರು.
ಇಂಡಿಯನ್ ಫೆಡರೇಷನ್ ಆಫ್ ಆರ್ ಬೇಸ್ಡ್ ಟ್ರಾನ್ಸ್ಪೋರ್ಟ್ ವರ್ಕರ್ಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್ ಸಲಾವುದ್ದೀನ್ ಮಾತನಾಡಿ, ಚಾಲಕರ ಸಬಲೀಕರಣಕ್ಕಾಗಿ ಯಾವುದೇ ಕಮಿಷನ್ ಇಲ್ಲದೆ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಚಾಲಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.
'ನಮ್ಮ ಯಾತ್ರಿ' ಸ್ವದೇಶಿ ಆ್ಯಪ್ ಆಗಿದ್ದು, ಗುಣಮಟ್ಟದ ಗ್ರಾಹಕ ಸೇವೆ ನೀಡುತ್ತಿದೆ. ಇದರಿಂದ ನಗರದಲ್ಲಿರುವ ಚಾಲಕರಿಗೆ ಸಹಕಾರಿಯಾಗಿದೆ. ಹೊಸತನ, ಪಾರದರ್ಶಕತೆ ಹಾಗೂ ಉತ್ತಮ ಸೇವೆಯ ಮೂಲಕ ನಮ್ಮ ಯಾತ್ರಿ ಕ್ಯಾಬ್ ಸೇವೆ ಯಶಸ್ವಿಯಾಗಲಿ. -ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
'ನಮ್ಮ ಯಾತ್ರಿ' ಈವರೆಗೆ 60 ಲಕ್ಷಕ್ಕೂ ಹೆಚ್ಚಿನ ಜನರಿಗೆ ಸೇವೆ ನೀಡಿದ್ದು, 2.5 ಕೋಟಿಗೂ ಹೆಚ್ಚು ಟ್ರಿಪ್ ಪಡೆದುಕೊಂಡಿದೆ. ಇದರಿಂದ ಚಾಲಕರು ಸುಮಾರು 420 ಕೋಟಿ ರೂ. ನೇರ ಗಳಿಕೆ ಮಾಡಲು ಸಾಧ್ಯವಾಗಿದೆ. ಇದೀಗ ನಗರದಲ್ಲಿ ಕ್ಯಾಬ್ ಸೇವೆ ಆರಂಭಗೊಂಡಿರುವುದು ಇನ್ನಷ್ಟು ಚಾಲಕರಿಗೆ ಆದಾಯ ಮಾರ್ಗ ತೋರಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ಸೇವೆ ರಾಜ್ಯಾದ್ಯಂತ ವಿಸ್ತರಿಸಿಕೊಳ್ಳುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ನಗರದ ಸಾರಿಗೆ ವ್ಯವಸ್ಥೆಯಲ್ಲಿ ಗುಣಮಟ್ಟದ ಸೇವೆ ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.