ಜಿಲ್ಲೆ

ನಮ್ಮ ಕಿಚನ್ ಮಳಿಗೆ ಉದ್ಘಾಟನೆ 14ರಂದು

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಬಳಿಯ ಡಿವೈನ್ ಗ್ರೂಪ್‌ನ ‘ನಮ್ಮ ಕಿಚನ್’ ಹೊಸ ಮಳಿಗೆಯನ್ನು ಆ. 14ರಂದು ಬೆಳಗ್ಗೆ 11.30ಕ್ಕೆ ಉದ್ಘಾಟಿಸಲಾಗುವುದು ಎಂದು ನಮ್ಮ ಕಿಚನ್ ಮಾಲೀಕ ಜಾನ್ ವಿಲ್ಸನ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿರುತೆರೆ ನಟಿ ಸೀತಾರಾಮ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಉದ್ಘಾಟಿಸುವರು. ಸಿಹಿ ಹೆಸರಿನ ಖ್ಯಾತಿ ಪಡೆದಿರುವ ಬಾಲನಟಿ ರಿತುಸಿಂಗ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಇತರರು ಆಗಮಿಸುವರು ಎಂದರು.
ಕಳೆದ 35 ವರ್ಷಗಳಿಂದ ಪ್ರತಿಷ್ಠಿತ ಕಂಪನಿಗಳ ಡಿಸ್ಟ್ರಿಬ್ಯೂಟರ್ ಆಗಿರುವ ಡಿವೈನ್ ಗ್ರೂಪ್, ಈಗಾಗಲೇ ಹುಬ್ಬಳ್ಳಿಯ ಗೋಕುಲ ರಸ್ತೆಯ ಡೆಕತ್ಲಾನ್ ಹಾಗೂ ಮುಂಡಗೋಡದಲ್ಲಿ ಶಾಖೆಗಳನ್ನು ಹೊಂದಿದೆ. ಇದೀಗ ನೂತನ ಮಳಿಗೆಯನ್ನು ಸ್ಥಾಪಿಸಿ ಉದ್ಘಾಟಿಸಲಾಗುತ್ತಿದೆ ಎಂದರು.
ಒಂದೇ ಸೂರಿನಡಿ ಅಡುಗೆ ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಒದಗಿಸಬೇಕೆಂಬ ಉದ್ದೇಶವಿದೆ. ಅದರಂತೆ ಹೊರದೇಶಗಳಿಂದಲೂ ವಸ್ತುಗಳನ್ನು ಆಮದು ಮಾಡಲಾಗಿದೆ. ಇದರ ಜತೆಗೆ ಮದುವೆ ಸಮಾರಂಭಕ್ಕೆ ಬೇಕಾದ ಕಿಟ್ ಸಹ ಲಭ್ಯವಿದೆ. ಸಾಮಗ್ರಿ ಖರೀದಿಸಲು ಗ್ರಾಹಕರಿಗೆ ಸಾಲ ಸೌಲಭ್ಯದ ಅವಕಾಶ ನೀಡಲಾಗಿದೆ. ಪ್ರತಿ ವಸ್ತುಗಳ ಮೇಲೆ ಶೇ. 50ರವರೆಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹದಿಮೂರುವರೆ ಸಾವಿರ ಚದರ ಅಡಿಯಲ್ಲಿ ಈ ಮಳಿಗೆ ಆರಂಭಿಸಲಾಗಿದೆ. ಇಟಾಲಿಯನ್, ದುಬೈ, ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳಿಂದ ಅಡುಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ತರಲಾಗಿದೆ. 20 ಸಾವಿರಕ್ಕೂ ಹೆಚ್ಚು ಸಾಮಗ್ರಿಗಳು ಹಾಗೂ 200ಕ್ಕೂ ಹೆಚ್ಚು ಬ್ರಾೃಂಡ್‌ಗಳು ಈ ಮಳಿಗೆಯಲ್ಲಿವೆ ಎಂದು ವಿವರಿಸಿದರು.
ಲೆಸ್ಲಿ ಜೊಸೆಫ್ ಸುದ್ದಿಗೋಷ್ಠಿಯಲ್ಲಿದ್ದರು.