ಜಿಲ್ಲೆ

ನಮ್ಮ ನಡಿಗೆ ಸ್ವಚ್ಚತೆಯ ಕಡೆಗೆ

Dharwada - Basavaraj Idli

ಹುಬ್ಬಳ್ಳಿ: 'ನಿಮ್ಮ ಭವಿಷ್ಯವನ್ನು ಕಸದ ಬುಟ್ಟಿಗೆ ಹಾಕಿಕೊಳ್ಳಬೇಡಿ, ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ' ಎನ್ನುವ ಸಂದೇಶ ಸಾರುವ ಮೂಲಕ ಸ್ವಚ್ಚತಾ ಅಂದೋಲನ ಪರಿವಾರದಿಂದ (ಎಸ್ಎಪಿ) ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

'ನಮ್ಮ ನಡಿಗೆ ಸ್ವಚ್ಛತೆಯ ಕಡೆಗೆ' ಕಾರ್ಯಕ್ರಮಕ್ಕೆ ಟ್ರಾಫಿಕ್ ಪೊಲೀಸ್ ಸ್ಟೇಶನ್ ಹತ್ತಿರದ ಸುಭಾಷ್ ನಗರ ಉದ್ಯಾನದಲ್ಲಿ ಚಾಲನೆ ನೀಡಲಾಯಿತು.

ಎಸ್ಎಪಿ ಪರಿವಾರದ ವಿ. ಮುಕುಂದ, ವೈ.ಬಿ. ಪಾಟೀಲ್, ಸಾಮಾಜಿಕ ಕಾರ್ಯಕರ್ತ ವಿನೋದಕುಮಾರ ಪಾಟವಾ, ರಘುರಾಜ ಇಬ್ರಾಹಿಂಪೂರ, ಮನೋಜ್ ಜೈನ್, ಸೋಮನಾಥ ಮೆಹರವಾಡೆ, ಮನೋಜ ಹಬ್ಬು, ನಿಖಿಲ್ ವಂಗಿ, ಪ್ರಿತಮ್ ಇರಕಲ್, ಮೇಘಾ ಚಾಗಾಪುರಂ, ತಾನ್ವಿ ಮೆಹರವಾಡೆ, ಪೂಜಾ ಕಟ್ಟಿಮನಿ, ಅಶ್ವಿನಿ ಕಟ್ಟಿಮನಿ, ಶ್ವೇತಾ ಗುಮ್ಮಟಿಮಠ, ಭಾವನಾ ನಾರನ್ನವರ್, ಪ್ರೀತಿ ರಾಯ್ಕರ್ ಮತ್ತು ಸ್ಥಳಿಯ ನಿವಾಸಿಗಳಾದ ಸುವರ್ಣಾ ಸಾಹುಕಾರ, ಸುನಂದಾ ಗಡಾದ, ಗಿರಿಜಾ ಸಂಗೊಳ್ಳಿ, ಮಂಜುಳಾ ಗುರು, ವಿಜಯಾ ಕರನಂದಿ, ಶೋಭಾ ಚಂದ್ರಪಟ್ಟಣ ಇತರರು ಸ್ವಚ್ಛತೆ ಆಂದೋಲನದಲ್ಲಿ ಭಾಗವಹಿಸಿದ್ದರು.