ಅಟಲ್‌ಜೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಂಬೆಟಡ್ಕದ ನೂತನ ಸಂಕೀರ್ಣ ’ನರೇಂದ್ರ ವಿಹಾರ’ದಲ್ಲಿ ನಾಮಫಲಕ ಅನಾವರಣ ಮತ್ತು ಸ್ನೇಹಮಿಲನ ಕಾರ್ಯಕ್ರದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು. 
ಜಿಲ್ಲೆ

ಪಕ್ಷ ಬೆಳೆಸಲು ಸರ್ವರ ಶ್ರಮ : ಶಾಸಕಿ ಭಾಗೀರಥಿ ಮುರುಳ್ಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಸುಳ್ಯ

ಭಾರತೀಯ ಜನತಾ ಪಕ್ಷದ ಶಿಸ್ತಿನ ಬಗ್ಗೆ ಸರ್ವರೂ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಇನ್ನಷ್ಟು ಬೆಳೆಸಲು ಮುಂದಡಿ ಇಡಬೇಕಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಅಟಲ್‌ಜೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಂಬೆಟಡ್ಕದ ನೂತನ ಸಂಕೀರ್ಣ ’ನರೇಂದ್ರ ವಿಹಾರ’ದಲ್ಲಿ ನಾಮಫಲಕ ಅನಾವರಣ ಮತ್ತು ಸ್ನೇಹಮಿಲನ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು.

ಹಿರಿಯರ ಶ್ರಮ ಪಕ್ಷದ ಬೆಳವಣಿಗೆಗೆ ಪೂರಕವಾಗಿದೆ. ಸ್ವಾಮಿ ವಿವೇಕಾನಂದರ ಮತ್ತು ಪ್ರಧಾನಿಯವರ ಹೆಸರನ್ನು ಪಕ್ಷದ ಕಾರ್ಯಾಲಯಕ್ಕೆ ಇಟ್ಟಿರುವುದು ಸಮಂಜಸವಾಗಿದೆ ಎಂದವರು ತಿಳಿಸಿದರು. ಇದಕ್ಕೂ ಮೊದಲು ಶಾಸಕಿಯ ಜೊತೆಗೆ, ಪಕ್ಷದ ಹಿರಿಯರಾದ ರಾಮಯ್ಯ ಭಟ್ ಪಂಜ, ರಾಧಾಕೃಷ್ಣ ಕೋಟೆ, ಪಿ.ಕೆ.ಉಮೇಶ್, ಬಯಂಬು ಭಾಸ್ಕರ ರಾವ್ ಸೇರಿ ನಾಮಫಲಕ ಅನಾವರಣ ಮಾಡಿದರು.

ಅಟಲ್‌ಜಿ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ರಾಮಯ್ಯ ಭಟ್ ಪಂಜ, ರಾಧಾಕೃಷ್ಣ ಕೋಟೆ, ಪಿ.ಕೆ.ಉಮೇಶ್, ಬಯಂಬು ಭಾಸ್ಕರ ರಾವ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಅಟಲ್‌ಜಿ ಸೇವಾ ಟ್ರಸ್ಟ್‌ಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಿದ ಮಧುಸೂದನ ಕುಂಭಕ್ಕೋಡು, ಲತಾ ಮಧುಸೂದನ ಅತಿಥಿಗಳಾಗಿದ್ದರು.

ಅಟಲ್‌ಜಿ ಚಾರಿಟೆಬಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ, ಕೋಶಾಧಿಕಾರಿ ಎ.ವಿ.ತೀರ್ಥರಾಮ ಟ್ರಸ್ಟ್‌ನ ಸದಸ್ಯರಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಸುಧಾಕರ ಕಾಮತ್, ರಾಕೇಶ್ ರೈ ಕೆಡೆಂಜಿ, ಮುಳಿಯ ಕೇಶವ ಭಟ್, ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ ಉಪಸ್ಥಿತರಿದ್ದರು.

ನಿವೇಶನ ಒದಗಿಸಿದ ಮಧುಸೂದನ ಕುಂಭಕ್ಕೋಡು, ಲತಾ ಮಧುಸೂದನ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ನ ಕೋಶಾಧಿಕಾರಿ ಎ.ವಿ.ತೀರ್ಥರಾಮ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ವಂದಿಸಿದರು. ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.