ಅಂಗಡಿಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸುವ ಕುರಿತು ಇಂಡಿ ಪಟ್ಟಣದ ಮಹಾವೀರ ವೃತ್ತದಲ್ಲಿ ಎಸಿ ಅಬೀದ ಗದ್ಯಾಳ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಯಿತು. ಬಿ.ಎಸ್.ಕಡಕಬಾವಿ, ಮಹಾಂತೇಶ ಹಂಗರಗಿ, ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ ಇತರರಿದ್ದರು. 
ಜಿಲ್ಲೆ

ಅಂಗಡಿಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸಿ

ಇಂಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಎಲ್ಲ ವ್ಯಾಪಾರಸ್ಥರು, ವರ್ತಕರು ತಮ್ಮ ಅಂಗಡಿಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ ಮತ್ತು ಕನ್ನಡ ಸಂಘಟನೆಗಳ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

ಜಾಗೃತಿ ಜಾಥಾದಲ್ಲಿ ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ, ತಾಲೂಕು ಕರವೇ ಅಧ್ಯಕ್ಷ ಬಾಳು ಮುಳಜಿ, ರಾಜು ಕುಲಕರ್ಣಿ, ಸಚಿನ ನಾವಿ, ಮಹೇಶ ಹೂಗಾರ, ಮಹಿಬೂಬ ಬೇನೂರ, ಪ್ರವೀಣ ಪೋದ್ದಾರ, ಸಂದೇಶ ಗಲಗಲಿ, ರಾಮಸಿಂಗ ಕನ್ನೊಳ್ಳಿ, ಶಿವಾನಂದ ಬಡಿಗೇರ, ಅಶೋಕ ಅಕಲಾದಿ, ಮುಸ್ತಾಕ ಇಂಡಿಕರ, ಕೇಶವ ಕಾಟಕರ, ಸುದೀಪ ನಾವಿ, ಪ್ರದೀಪ ಶೆಟ್ಟಿ, ಅದೃಶ್ಯಪ್ಪ ವಾಲಿ, ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿ, ಕರವೇ ಕಾರ್ಯಕರ್ತರು ಇತರರಿದ್ದರು.

ಜಾಗೃತಿ ಜಾಥಾ ಮಿನಿ ವಿಧಾನಸೌಧದಿಂದ ಮಹಾವೀರ ವೃತ್ತದವರೆಗೆ ಮತ್ತು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.