ಸುಂಟಿಕೊಪ್ಪದಲ್ಲಿ ಸರ್ಕಾರಿ ಮತ್ತು ವಿವಿಧ ಸಂಘ,ಸಂಸ್ಥೆಗಳಿಗೆ ಸೇರಿದ ಫಲಕಗಳನ್ನು ಎಸ್‌ವೈಎಸ್ ತಂಡದ ಯುವಕರು ಸ್ವಚ್ಛಗೊಳಿಸಿದರು.  
ಜಿಲ್ಲೆ

ನಾಮಫಲಕಗಳ ಸ್ವಚ್ಛತಾ ಕಾರ್ಯ

ಅಭಿನಯ್ ಎಚ್.ಎಂ

ಸುಂಟಿಕೊಪ್ಪ: ಸುಂಟಿಕೊಪ್ಪ ಎಸ್‌ವೈಎಸ್ ವತಿಯಿಂದ ಫ್ರೆಶ್ ಇಂಡಿಯಾ ಎಂಬ ಧೇಯ ವಾಕ್ಯದೊಂದಿಗೆ ಸುಂಟಿಕೊಪ್ಪ ಸರ್ಕಾರಿ ಹಾಗೂ ಸಂಘ, ಸಂಸ್ಥೆಗಳ ಫಲಕಗಳ ಸ್ವಚ್ಛತಾ ಕಾರ್ಯವನ್ನು  ಎಸ್‌ವೈಎಸ್ ತಂಡದ ಪದಾಧಿಕಾರಿಗಳು ನಡೆಸಿದರು.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಎಸ್‌ವೈಎಸ್ ಟೀಂ ಇಸಾಬಾ ತಂಡದ ಯುವಕರು ಗದ್ದೆಹಳ್ಳದಿಂದ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ವಿವಿಧ ಸಂಘ, ಸಂಸ್ಥೆಗಳಿಗೆ ಸೇರಿದ ಫಲಕಗಳನ್ನು ಸ್ವಚ್ಛಗೊಳಿಸಿದರು. ನಾಸೀರ್, ಸಾಹಿಲ್ ಇತರರು ಇದ್ದರು.