ವಿಜಯಪುರದ ನಮ್ಮ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ನಂ. 4 ಕ್ಕೆ ಗಿಲಾವ್ ಮಾಡಿ, ಸುಣ್ಣ ಬಣ್ಣ ಬಳಿದು ಸುಂದರಗೊಳಿಸಿರುವ ಗಾನಯೋಗಿ ಸಂಘದ ಸದಸ್ಯರು. ಪ್ರಕಾಶ ಆರ್.ಕೆ., ಬಾಹುಬಲಿ ಶಿವಣ್ಣವರ್ ಮತ್ತಿತರರಿದ್ದರು. 
ಜಿಲ್ಲೆ

ಅಂದವಾಯ್ತು ಸರ್ಕಾರಿ ಶಾಲೆ - ಗಾನಯೋಗಿ ಸಂಘದ ಶೈಕ್ಷಣಿಕ ಕಾಳಜಿ

ವಿಜಯಪುರ: ಒಂದಿಲ್ಲ ಒಂದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುತ್ತಿರುವ ಗಾನಯೋಗಿ ಸಂಘದ ಪದಾಧಿಕಾರಿಗಳು ಇದೀಗ ಸರ್ಕಾರಿ ಶಾಲೆಗೆ ಗಿಲಾವ್ ಮಾಡಿ, ಸುಣ್ಣ-ಬಣ್ಣ ಬಳಿದು ಸುಂದರಗೊಳಿಸುವ ಮೂಲಕ ಶೈಕ್ಷಣಿಕ ಕಾಳಜಿ ಮೆರೆದಿದ್ದಾರೆ.

ನಗರದ ನಮ್ಮ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ನಂ.4ರಲ್ಲಿ ಕಳೆಗುಂದಿದ ಕಟ್ಟಡಕ್ಕೆ ಗಿಲಾವ್ ಮಾಡಿಸಿ ಸುಣ್ಣ ಬಣ್ಣ ಬಳಿದು ಸುಂದರಗೊಳಿಸಿದ್ದಾರೆ. ಹಲವು ದಿನಗಳಿಂದ ಈ ಶಾಲೆ ಸುಸ್ಥಿತಿಯಲ್ಲಿರಲಿಲ್ಲ. ಗೋಡೆಗಳು ಹದಗೆಟ್ಟಿದ್ದವು. ಇದನ್ನು ಕಂಡ ಗಾನಯೋಗಿ ಸಂಘದ ಸದಸ್ಯರು ಇಡೀ ಶಾಲೆಯನ್ನು ಸುಂದರಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಂಘದ ಅಧ್ಯಕ್ಷ ಪ್ರಕಾಶ ಆರ್.ಕೆ., ಸದಸ್ಯರಾದ ಬಾಹುಬಲಿ ಶಿವಣ್ಣವರ್, ರವಿ ರತ್ನಾಕರ, ವಿಕಾಸ ಕಂಬಾಗಿ, ಸಂತೋಷ ಚವ್ಹಾಣ, ಮಹೇಶ ಕುಂಬಾರ, ರಾಜಕುಮಾರ ಹೊಸಟ್ಟಿ, ಸಚಿನ್ ವಾಲೀಕಾರ, ವೀರೇಶ ಸೊನ್ನಲಗಿ, ವಿಠ್ಠಲ ಗುರುವಿನ, ಶ್ರೀಶೈಲ ಜುಮನಾಳ ಮತ್ತಿತರರಿದ್ದರು.