ವಿಜಯಪುರ : ನಗರದ ಪ್ರತಿಷ್ಠಿತ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು ಜಗತ್ತಿನ ಖ್ಯಾತ ಬ್ರಿಟಿಷ್ ವೈದ್ಯಕಿಯ ಪ್ರಕಾಶನ ಸಂಸ್ಥೆಯ ಬಿಎಂಜೆ ಕೇಸ್ ರಿಪೋರ್ಟ್ ವೈದ್ಯಕಿಯ ವಿಜ್ಞಾನ ಮಾಸಿಕ ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಆಯ್ಕೆಯಾಗಿದ್ದಾರೆ.
ವಿಶ್ವದ ಪ್ರತಿಷ್ಠಿತ ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಆಯ್ಕೆಯಾದ ಭಾರತದ ಮೊದಲ ಚರ್ಮರೋಗ ತಜ್ಞ ಎಂಬ ಹೆಗ್ಗಳಿಕೆಗೆ ಡಾ.ಅರುಣ ಇನಾಮದಾರ ಪಾತ್ರರಾಗಿದ್ದಾರೆ. ಚರ್ಮರೋಗ ವೈದ್ಯಕಿಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಡಾ. ಅರುಣ ಚಂ. ಇನಾಮದಾರ ಅವರಿಗೆ ಬಿಎಲ್ಡಿಇ ಡೀಮ್ಡ್ ವಿವಿ ಕುಲಾಧಿಪತಿ ಎಂ.ಬಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.