ಜಿಲ್ಲೆ

ಕಿತ್ತೂರು ಕರ್ನಾಟಕದ ಹೆಸರನ್ನು ಆಡಳಿತದ ಎಲ್ಲ ಸ್ತರಗಳಲ್ಲಿ ಜಾರಿಗೊಳಿಸಿ

Dharwada - Basavaraj Idli

ಹುಬ್ಬಳ್ಳಿ: ಕಿತ್ತೂರ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ವಾಯುವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸ್ತರಗಳಲ್ಲಿ ಕಿತ್ತೂರು ಕರ್ನಾಟಕವೆಂದು ನಮೂದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಹಾಗೂ ಕಿತ್ತೂರು ಕರ್ನಾಟಕ ನಾಮಕರಣ ಹೋರಾಟ ಸಮಿತಿಯ ಅಧ್ಯಕ್ಷ ಗಂಗಾಧರ ದೊಡ್ಡವಾಡ ಆಗ್ರಹಿಸಿದ್ದಾರೆ.

ಕಿತ್ತೂರ ಕರ್ನಾಟಕ ನಾಮಕರಣವಾಗಿ ಒಂದೂವರೇ ವರ್ಷ ಮೇಲಾಗಿದೆ. ಇಲ್ಲಿಯವರೆಗಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರನ್ನು ಬದಲಿಸಿಲ್ಲ. ಜೊತೆಗೆ ಸರ್ಕಾರಿ ಆಡಳಿತದಲ್ಲಿ ಕಿತ್ತೂರು ಕರ್ನಾಟಕದ ಹೆಸರನ್ನು ನಮೂದಿಸಿಲ್ಲ.

ಬರುವ ನವೆಂಬರ್ ೧ರ ಒಳಗಾಗಿ ಕಿತ್ತೂರು ಕರ್ನಾಟಕದ ವ್ಯಾಪ್ತಿಗೆ ಬರುವ ಎಲ್ಲ ಜಿಲ್ಲೆಗಳ ಆಡಳಿತದಲ್ಲಿ ಕಿತ್ತೂರು ಕರ್ನಾಟಕ ಎಂಬ ಹೆಸರು ನಮೂದಿಸಬೇಕೆಂದು ದೊಡ್ಡವಾಡ ಮನವಿ ಮಾಡಿದ್ದಾರೆ.