ಜಿಲ್ಲೆ

ಸರ್ಕಾರದಲ್ಲಿ ನಾಮ ನಿರ್ದೇಶನ, ಕಾಂಗ್ರೆಸ್ ಪಾಳಯದಲ್ಲಿ ಪೈಪೋಟಿ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದಲ್ಲಿ ವಿವಿಧ ನಾಮ ನಿರ್ದೇಶನಗಳಿಗೆ ಕಾಂಗ್ರೆಸ್ ಪಾಳಯದಲ್ಲಿನ ಆಕಾಂಗಳ ಪಟ್ಟಿಯು ಪಕ್ಷದ ವರಿಷ್ಠರ ಕೈ ಸೇರಿದ್ದು ತ್ವರಿತವಾಗಿ ಅಧಿಕಾರದ ಹೊಣೆ ಹೊರಲು ಚಾತಕ ಪಕ್ಷಿಗಳಂತೆ ಎದುರು ನೋಡಲಾಗುತ್ತಿದೆ.
ವಿವಿಧ ನಿಗಮ&ಮಂಡಳಿ, ಸ್ಥಳಿಯ ಆಡಳಿತ ಸಂಸ್ಥೆಗಳಿಗೆ ಅರ್ಹರನ್ನು ನೇಮಿಸುವ ಪ್ರಕ್ರಿಯೆಯು ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಮಗ್ರವಾಗಿ ಪರಿಶೀಲಿಸಿರುವ ಗೃಹ ಸಚಿವ ಜಿ.ಪರಮೇಶ್ವರ್, ಅರ್ಹರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸಲ್ಲಿಸಿದ್ದಾರೆ. ಇದರ ಬಗ್ಗೆ ಚರ್ಚೆ ಮುಗಿದ ಬಳಿಕ ನೇಮಕ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

*ವಿಧಾನಕ್ಷೇತ್ರವಾರು ಮೂವರು
ಈಗಾಗಲೇ ಜಿಲ್ಲೆಯಲ್ಲಿ ಕೈ ಶಾಸಕರು, ಹಿರಿಯ ನಾಯಕರು ನಿಷ್ಠರ ಹೆಸರನ್ನು ಸೂಚಿಸಿದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರವಾರು ತಲಾ ಮೂವರ ಹೆಸರನ್ನು ಜಿಲ್ಲಾ ಕಾಂಗ್ರೆಸ್ ಶಿಾರಸು ಮಾಡಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಸಹ ಅನುಮೋದನೆ ನೀಡಿದ್ದಾರೆ. ಇದರಿಂದ ಯಾವುದೇ ಗೊಂದಲವಿಲ್ಲದೇ ನಾಮ ನಿರ್ದೇಶನಗಳಿಗೆ ಹೆಸರು ಘೋಷಣೆಯಾಗಲಿದೆ.
ಹಾಗೆಯೇ ಹಿಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದ ಹಿರಿಯ ನಾಯಕರಿಗೂ ಜವಾಬ್ದಾರಿಯನ್ನು ವಹಿಸುವ ನಿಟ್ಟಿನಲ್ಲಿ ಚರ್ಚೆಗಳು ಅಂತಿಮ ಹಂತಕ್ಕೆ ಬಂದಿವೆ.
ಕಳೆದ 2023 ರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದ್ದು ಸಚಿವ ಸಂಪುಟ ರಚನೆಯ ಬಳಿಕ ಸ್ವಪಕ್ಷೀಯ ಮಾಜಿ ಶಾಸಕರು, ಜಿ.ಪಂ.ಮಾಜಿ ಅಧ್ಯಕ್ಷರು ಸೇರಿದಂತೆ ಹಲವರು ನಿಗಮ&ಮಂಡಳಿಗಳು, ಪ್ರಾಧಿಕಾರಗಳ ಗಾದಿ ಮತ್ತು ವಿವಿಧ ಹುದ್ದೆಗಳ ಮೇಲೆ, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸ್ಥಳಿಯ ಆಡಳಿತ ಸಂಸ್ಥೆಯಲ್ಲಿ ನಾಮ ನಿರ್ದೇಶನಕ್ಕಾಗಿ ಎದುರು ನೋಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ಪೂರ್ವ ಪಕ್ಷ ಸಂಟನೆಯ ಪ್ರಾಮಾಣಿಕ ಪರಿಶ್ರಮಕ್ಕೆ ಒಳ್ಳೆಯ ಸ್ಥಾನಮಾನ ನೀಡುವ ಭರವಸೆ ನೀಡಲಾಗಿತ್ತು. ಇದೀಗ ಮುಂಬರುವ ದಿನಗಳಲ್ಲಿ ನಿರೀೆಯ ಜಿ.ಪಂ, ತಾ.ಪಂ.ಚುನಾವಣೆಗೆ ಉತ್ಸಾಹ ತುಂಬಲು ಮತ್ತೊಮ್ಮೆ ನಾಮ ನಿರ್ದೇಶನ ಪ್ರಕ್ರಿಯೆಯು ಪಕ್ಷಕ್ಕೆ ಬಲದ ಅಸ್ತ್ರವಾಗಿದೆ.

*ಆಕಾಂಕ್ಷಿಗಳ ಪೈಪೋಟಿ
ಈಗಾಗಲೇ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆ.ಎನ್.ಕೇಶವರೆಡ್ಡಿ ಆಯ್ಕೆಯಾಗಿದ್ದಾರೆ. ಇವರಿಂದ ತೆರವಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಜಿ.ಪಂ.ಮಾಜಿ ಅಧ್ಯಕ್ಷ ಗಂಗರೆಕಾಲುವೆ ನಾರಾಯಣಸ್ವಾಮಿ ಪೈಪೋಟಿ ನಡೆಸುತ್ತಿದ್ದಾರೆ. ಇನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ರಾಜೀನಾಮೆ ನೀಡಿದ್ದು ಈ ಸ್ಥಾನಕ್ಕೆ ಇತ್ತೀಚೆಗೆ ಖಾದಿ ಹಾಗೂ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್ ರನ್ನು ನೇಮಿಸಲಾಗಿದೆ. ಹೀಗೆ ಹಂತ ಹಂತವಾಗಿ ಒಬ್ಬೊಬ್ಬರಿಗೆ ಅವಕಾಶ ಸಿಗುತ್ತಿದೆ. ಇನ್ನು ರಾಜ್ಯ ಬಲಿಜ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೆಸರನ್ನು ಪರಿಗಣಿಸಬೇಕೆಂಬುದಾಗಿ ಒತ್ತಡ ಹೇರಲಾಗಿದೆ.

*ಸ್ವಪಕ್ಷೀಯರ ಪೈಪೋಟಿ
ಸ್ಥಳೀಯ ಆಡಳಿತ ಸಂಸ್ಥೆಗಳ ನಾಮ ನಿರ್ದೇಶನ, ಪಕ್ಷದ ಪದಾಧಿಕಾರಿಗಳ ಹುದ್ದೆಗೆ ನಿರೀಕ್ಷೆಯಂತೆ ಸ್ವಪಕ್ಷೀಯ ಪಾಳಯದಲ್ಲಿ ಪೈಪೋಟಿ ಹೆಚ್ಚಾಗಿದೆ. ಆಕಾಂಕ್ಷಿಗಳು ಜಿಲ್ಲಾ ಮಟ್ಟದ ನಾಯಕರ ಜತೆಗೆ ರಾಜ್ಯ ಮಟ್ಟದ ಹಂತದಲ್ಲೂ ಒತ್ತಡ ಹೇರಿದ್ದಾರೆ. ಇದರ ನಡುವೆ ಯಾರು ಮೇಲುಗೈ ಸಾಧಿಸಿದ್ದಾರೆ? ಯಾರು ಅವಕಾಶ ವಂಚಿತರಾಗಲಿದ್ದಾರೆ ಎನ್ನುವುದು ಪಕ್ಷದಲ್ಲಿ ಚರ್ಚೆಗೆಗ್ರಾಸವಾಗಿದೆ.
ಗೌರಿಬಿದನೂರಿನಲ್ಲಿ ರಾಜ್ಯ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಮತ್ತು ಕಾಂಗ್ರೆಸ್ ಪ್ರಭಾವಿ ನಾಯಕ, ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ನಡುವೆ ಕಸರತ್ತು ಜೋರಾಗಿದ್ದು ಒಳ್ಳೆಯ ಸ್ಥಾನಮಾನ ಕೊಡಿಸುವ ಮೂಲಕ ಬೆಂಬಲಿಗರನ್ನು ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಇಬ್ಬರಲ್ಲಿ ಯಾರಿಗೆ ಆದ್ಯತೆ ನೀಡಿದರೂ ಭಿನ್ನಮತ ತಪ್ಪಲ್ಲ ಎನ್ನುವಂತಹ ಪರಿಸ್ಥಿತಿ ಇಲ್ಲಿದೆ.