ಜಿಲ್ಲೆ

ನಾಮದೇವ ಅಧ್ಯಾತ್ಮ ಸೇವೆ ಅಪಾರ

ಪ್ರಶಾಂತ ಹೂಗಾರ

ಅಥಣಿ: ಪಟ್ಟಣದ ಸಂತ ಶಿರೋಮಣಿ ನಾಮದೇವ ಮಹಾರಾಜರ ಹರಿಮಂದಿರದಲ್ಲಿ ಶನಿವಾರ ಪುಣ್ಯತಿಥಿ ಜರುಗಿತು.

ನಾಮದೇವ ಸಿಂಪಿ ಸಮುದಾಯದ ಅಧ್ಯಕ್ಷ ಅಣ್ಣಾಸಾಹೇಬ ಮಿರಜಕರ ಮಾತನಾಡಿ, ನಾಮದೇವ ಮಹಾರಾಜರು ಪಾಂಡುರಂಗನ ಭಕ್ತರಾಗಿ ಉತ್ತರ ಭಾರತದಾದ್ಯಂತ ಸಂಚರಿಸಿ ಅಧ್ಯಾತ್ಮ ಸಂದೇಶ ಸಾರಿದ್ದಾರೆ. ಜನರಲ್ಲಿ ಭಕ್ತಿಯ ಜಾಗೃತಿ ಮೂಡಿಸಿದ್ದಾರೆ. ಪಾಂಡುರಂಗನ ನಾಮಸ್ಮರಣೆ ಮಾಡಿದರೆ ಎಲ್ಲ ಪಾಪಗಳು ಪರಿಹಾರವಾಗುತ್ತವೆ. ಮಹಾರಾಜರನ್ನು ನೆನೆಯುತ್ತ ಬದುಕು ಸುಂದರವಾಗಿಸಿಕೊಳ್ಳಬೇಕು ಎಂದರು.

ಅಭಂಗ, ಕೀರ್ತನೆ ಮತ್ತು ಭಜನೆ ಜರುಗಿದವು. ಪ್ರದೀಪ ಅಂಬೇಕರ, ಬಾಳಾಸಾಹೇಬ ಖಾಂಡೆಕರ, ಮಿಥುನ ಅಂಬೇಕರ, ರಾಜಾರಾಮ ಪಾಟೀಲ, ಅಶೋಕ ಮೊಹಿತೆ, ವಿನಾಯಕ ಅಂಬೇಕರ ಇದ್ದರು.

ಅಥಣಿ ಪಟ್ಟಣದ ನಾಮದೇವ ಹರಿಮಂದಿರದಲ್ಲಿ ಮಹಾರಾಜರ ಪುಣ್ಯತಿಥಿ ಅಂಗವಾಗಿ ಭಜನಾ ಕಾರ್ಯಕ್ರಮ ಜರುಗಿತು. ಅಣ್ಣಾಸಾಹೇಬ ಮಿರಜಕರ, ಪ್ರದೀಪ ಅಂಬೇಕರ, ಬಾಳಾಸಾಹೇಬ ಖಾಂಡೆಕರ, ಮಿಥುನ ಅಂಬೇಕರ ಇತರರಿದ್ದರು.