ಮಂಗಳೂರು: ನಮ್ಮ ಜವನೆರ್ ಟ್ರಸ್ಟ್ ರಾಯಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ರಾಯಿ ಪೇಟೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಮಿಯಾಲ್ ಅವರು, ನವೆಂಬರ್ 5ರಂದು ರಾಯಿ ಬಳಪು ಕೇಂದ್ರ ಮೈದಾನದಲ್ಲಿ ಬೆಳಗ್ಗೆ ಮಂಗಳೂರು ಎ.ಜೆ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ಆರೋಗ್ಯ ಶಿಬಿರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಅವರ ಸಹಕಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಹೇಳಿದರು.
ಸಂಜೆ 6ರಿಂದ ಸ್ಥಳೀಯ ಪ್ರತಿಭೆ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 7.30ಕ್ಕೆ ಸಭಾ ಕಾರ್ಯಕ್ರಮ, ಅರೋಗ್ಯ ನಿಧಿ ವಿತರಣೆ ನಡೆಯಲಿದೆ. ರಾತ್ರಿ 8.30 ಕ್ಕೆ ವಿಜಯ್ ಕುಮಾರ್ ಕೊಡಿಯಾಲಬೈಲ್ ಅವರ ‘ಶಿವಧೂತ ಗುಳಿಗ’ ನಾಟಕ ಪ್ರದರ್ಶನ ನಡೆಯಲಿದೆ ಎಂದುತಿಳಿಸಿದರು.
ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿ ಬೆಟ್ಟು, ಜೀರ್ಣೋದ್ದಾರ ಸಮಿತಿ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಗೌಡ ಕಾರಂಬಡೆ, ಟ್ರಸ್ಟ್ ಉಪಾಧ್ಯಕ್ಷ ಗಣೇಶ್ ಬರೆಬಾಯಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಮಿತ್ ಶಿವನಗರ, ಕೋಶಾಧಿಕಾರಿ ಪವನ್ ರಾಯಿ ಉಪಸ್ಥಿತರಿದ್ದರು.