ಜಿಲ್ಲೆ

ಮಾನವೀಯ ಮೌಲ್ಯ ಬೆಳೆಸುವ ಸಂಗೀತ: ಕಲಾವಿದೆ ರಶ್ಮಿ ಚಿಕ್ಕಮಗಳೂರು ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಂಗೀತ ಕಲಿಕೆ ಮಾನವೀಯ ಮೌಲ್ಯ ಮತ್ತು ಸಭ್ಯತೆ ಕಲಿಸುತ್ತದೆ. ಮಾತ್ರವಲ್ಲದೆ ಸಂಗೀತ ಅಭ್ಯಾಸ ಮಾಡಲು ಹಾಗೂ ಆಲಿಸಲು ವಯಸ್ಸಿನ ಅಡ್ಡಿ ಬರುವುದಿಲ್ಲ ಎಂದು ಸುಗಮ ಸಂಗೀತ ಕಲಾವಿದೆ ರಶ್ಮಿ ಚಿಕ್ಕಮಗಳೂರು ಹೇಳಿದರು.

ನಗರದ ಗಾಂಧಿಭವನದಲ್ಲಿ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ(ಹಿರಿಯ ವಿದ್ಯಾರ್ಥಿಗಳ)ದ ಸಹಯೋಗದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಲ್ಲಿಯೇ ಸಂಗೀತ ಕಲಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸುಗಮ ಸಂಗೀತವನ್ನು ಕೊಂಡೊಯ್ಯುವ ಮನೋಭಾವ ಸಂಗೀತಗಾರರಲ್ಲಿ ಹೆಚ್ಚಬೇಕು. ಇದರಿಂದ ಅದರ ತಿಳಿವಳಿಕೆಯು ಜನರಲ್ಲಿ ಮೂಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಸುರೇಶ್ ಮಾತನಾಡಿ, ನೋವು ಮರೆಸುವ ಶಕ್ತಿ ಸಂಗೀತಕ್ಕೆ ಇದೆ. ಹಳೆಯ ವಿದ್ಯಾರ್ಥಿಗಳೆಲ್ಲರೂ ಒಂದೇ ವೇದಿಕೆಯಲ್ಲಿ ಹಾಗೂ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಮುಂದೆಯೂ ಸಹ ನಮ್ಮ ಹಳೆಯ ವಿದ್ಯಾರ್ಥಿಗಳೊಟ್ಟಿಗೆ ಸಮಾಜಮುಖಿ ಕೆಲಸದಲ್ಲಿ ತೊಡಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವೇಶ್ವರ ಅಕ್ಕಿಗಿರಣಿ ಮಾಲೀಕ ಬಸವರಾಜು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಗಾಯಕರಾದ ಹೆಮ್ಮಿಗೆ ಶಿವಮಾದು, ಸಿ.ಪಿ.ವಿದ್ಯಾಶಂಕರ್, ಗೆಜ್ಜಲಗೆರೆ ಗಂಗಾಧರ್, ಹಂಸ ರೇಖಾ ಇದ್ದರು.