ಜಿಲ್ಲೆ

ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

ಸದೇಶ್ ಕಾರ್ಮಾಡ್

ಮೈಸೂರು: ಮೈಸೂರು ಕನ್ನಡ ವೇದಿಕೆ ವತಿಯಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಮಂಗಳವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ ನಾಲ್ವಡಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿತ್ತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಅನಂತ ಪದ್ಮನಾಭ (ಶಿಕ್ಷಣ), ಆರ್. ಆನಂದ್, ಗುರುರಾಜ, ಬಿ.ಆರ್. ವಿಜಯಶ್ರೀ (ಗಾಯನ), ಡಾ. ಸೌಗಂಧಿಕ ಎ. ಜೋಯಿಸ್ (ಸಾಹಿತ್ಯ), ಡಾ. ರೇಖಾ ಮನಶಾಂತಿ (ಮನೋವಿಜ್ಞಾನ), ಅರುಣ್ ರಾವ್ (ವಕೀಲ), ಡಾ. ರೇಖಾ ಅರುಣ್ (ವೈದ್ಯಕೀಯ), ಆದಿಲ್ ಪಾಷ (ಸಾಹಿತ್ಯ), ಗೌರಿ ಓಸ್ತವಾಲ್ (ಭರತನಾಟ್ಯ), ಗಣೇಶ್ (ಪತ್ರಿಕೋದ್ಯಮ), ರಮೇಶ್ ಬಾಳಪ್ಪ (ಸಂಘಟನೆ) ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ್ತ್ರೀರೋಗ ತಜ್ಞರಾದ ಡಾ. ರೇಖಾ ಅರುಣ್ ಮಾತನಾಡಿ, ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರು ನೀಡಿದ ಕೊಡುಗೆಯಿಂದ ನಗರ ಇಷ್ಟೊಂದು ಅಭಿವೃದ್ಧಿ ಕಂಡಿದೆ. ಶಿಕ್ಷಣ, ಕೃಷಿ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಅವರು ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ ಎಂದರು.

ವೇದಿಕೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಗಂಗಾಧರಸ್ವಾಮಿ, ಸಮಾಜ ಸೇವಕ ಡಾ.ಶ್ರೀಷಾ ಭಟ್, ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಕನ್ನಡಪರ ಹೋರಾಟಗಾರ ನಾಲಾಬೀದಿ ರವಿ ಹಾಗೂ ಇತರರು ಇದ್ದರು.