ಜಿಲ್ಲೆ

ನೊಂದವರಿಗೆ ನಲಿವು ನೀಡುವ ಕಾಯಕ

ಸುನಿಲ್ ಪೊನ್ನೇಟಿ

ಮಡಿಕೇರಿ:

ಬದುಕಿನ ಕೊನೆಯ ಘಟ್ಟದಲ್ಲಿ ನೋವಿನ ಭಾರದೊಂದಿಗೆ ಆಶ್ರಮದಲ್ಲಿ ಆಶ್ರಯ ಪಡೆದಿರುವ ಸಂಧ್ಯಾಕಾಲದ ಬಂಧುಗಳಿಗಾಗಿ ಮಿಡಿಯುತ್ತಿರುವ ಮಡಿಕೇರಿಯ ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗ ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಡೆಸಿಕೊಂಡು ಬರುತ್ತಿರುವ ಮಾದರಿ ಕಾರ್ಯಕ್ರಮವನ್ನು ಮುಂದುವರೆಸಿದೆ. ಇದರಂತೆ ಈ ಭಾನುವಾರ (ಅ.27) ವಿರಾಜಪೇಟೆಯ ಹೆಗ್ಗಳ ಸ್ನೇಹ ನಿಲಯ ಆಶ್ರಮದಲ್ಲಿ ಹಿರಿಯರೊಂದಿಗೆ ಬೆರೆತ ಬಳಗದ ಪ್ರಮುಖರು ಹಾಗೂ ಸದಸ್ಯರು ನೊಂದವರ ಮನಸ್ಸಿನಲ್ಲಿ ಉಲ್ಲಾಸ ತುಂಬುವ ಪ್ರಯತ್ನ ಮಾಡಿದರು. ರಸಮಂಜರಿ ಕಾರ್ಯಕ್ರಮದ ಮೂಲಕ ಮನೋರಂಜನೆ ನೀಡಿದ ಬಳಗದ ಗಾಯಕರು ಆಶ್ರಮವಾಸಿಗಳು ನೃತ್ಯ ಮಾಡಿ ಸಂಭ್ರಮಿಸುವ ಕ್ಷಣವನ್ನು ಸೃಷ್ಟಿಸಿದರು, ವಿವಿಧ ಭಕ್ಷö್ಯ ಭೋಜನವನ್ನೂ ನೀಡಿದರು.

ಇದೇ ಸಂದರ್ಭ ಸ್ಥಳೀಯ ವಿದ್ಯಾರ್ಥಿನಿ ಬಿಂದು ಬೋಪಯ್ಯ ಅವರು ಆಶ್ರಮವಾಸಿ ಹಿರಿಯರೊಂದಿಗೆ ಜನ್ಮ ದಿನವನ್ನು ಆಚರಿಸಿ ಕೇಕ್ ಮತ್ತು ಸಿಹಿ ಹಂಚಿ ಮಾದರಿಯಾದರು. ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗ ಹಾಗೂ ಫೈವ್ ಸ್ಟಾರ್ ಸಿಂಗರ್ಸ್ನÀ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಮೊಹಮ್ಮದ್ ಅಲಿ, ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್, ಪ್ರಮುಖರಾದ ಗಿಲ್ಬರ್ಟ್ ಕತ್ತಲೆ ಕಾಡು, ಜಯಂತ್, ಅಬ್ದುಲ್ ಲತೀಫ್, ದೀಕ್ಷಿತ್, ಅಬ್ದುಲ್ ರಜಾಕ್, ಹ್ಯಾರಿಸ್ ಹಾಗೂ ಫೈವ್ ಸ್ಟಾರ್ ಸಿಂಗರ್ಸ್ನÀ ಗಾಯಕರಾದ ಭಾಷಾ, ಶಿವಣ್ಣ, ಹಬೀಬ್, ಗೋಣಿಕೊಪ್ಪದ ಐಕ್ಯಂ ಯುವಸೇನೆ ಅಧ್ಯಕ್ಷ ವಿಘ್ನೇಶ್ ಮತ್ತಿತರರು ಪಾಲ್ಗೊಂಡಿದ್ದರು.