ಮೈಸೂರು: ಜೆಎನ್ಯುು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮೈಸೂರು ವಿವಿ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಭಿತ್ತಿಫಲಕ ಹಿಡಿದು, ದೇಶದ್ರೋಹದ ಆರೋಪಕ್ಕೆ ಗುರಿಯಾಗಿರುವ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ನಿರ್ಧರಿಸಿದೆ. ಇದರಿಂದ ಕೆರಳಿದ ನಳಿನಿ, ಕೋರ್ಟ್ ಆವರಣದಲ್ಲಿ ‘ನೋ ಹ್ಯೂಮ್ಯಾನಿಟಿ’ ಘೊಷಣೆ ಕೂಗುವ ಮೂಲಕ ರಂಪಾಟ ನಡೆಸಿದರು.
ಮಂಗಳವಾರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ಇದ್ದುದ್ದರಿಂದ ನಳಿನಿ ತಾಯಿಯೊಂದಿಗೆ ಕೋರ್ಟ್ಗೆ ಹಾಜರಾಗಿದ್ದರು. ಆದರೆ ಆಕೆಯ ಪರ ವಕಾಲತ್ತು ವಹಿಸದಿರಲು ನಿರ್ಣಯ ಕೈಗೊಂಡಿದ್ದ ವಕೀಲರ ಸಂಘ, ಈ ಕುರಿತ ಫಲಕವನ್ನು ಸಂಘದ ಆವರಣದಲ್ಲಿ ಹಾಕಿತ್ತು. ಇದನ್ನು ಗಮನಿಸಿದ ನಳಿನಿ ಅಸಮಾಧಾನಗೊಂಡು ‘ನೋ ಹ್ಯೂಮ್ಯಾನಿಟಿ’ ಎಂದು ಜೋರಾಗಿ ಕೂಗಿದರು. ಮಾಧ್ಯಮದವರ ವಿರುದ್ಧವೂ ನಳಿನಿ ಮುಗಿಬಿದ್ದರು. ಫುಟ್ಪಾತ್ನಲ್ಲಿ ಕುಳಿತು ಕೆಲಕಾಲ ರಂಪಾಟ ನಡೆಸಿದ ಮಗಳನ್ನು ಅವರ ತಾಯಿ ಸಮಾಧಾನ ಮಾಡಿದರು. ಪ್ರತಿರೋಧ ತೋರುತ್ತಲೆ ಕೋರ್ಟ್ ಆವರಣದಿಂದ ಹೊರ ನಡೆದ ನಳಿನಿಯನ್ನು ಆಟೋದಲ್ಲಿ ಮನೆಗೆ ಕರೆದುಕೊಂಡು ಹೋದರು.
ವಕಾಲತ್ತು ವಹಿಸದಿರಲು ನಿರ್ಣಯ
‘ಫ್ರೀ ಕಾಶ್ಮೀರ’ ಘೊಷಣೆ ಕೂಗಿದ ನಳಿನಿ ಪರ ವಕಾಲತ್ತು ವಹಿಸಬಾರದು ಎಂದು ಮೈಸೂರು ವಕೀಲರ ಸಂಘದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆಕೆ ವಿರುದ್ಧ ದೇಶ ವಿರೋಧಿ ಪ್ರಕರಣ ದಾಖಲಾಗಿರುವುದರಿಂದ ಅವರ ಪರ ಯಾರೂ ವಕಾಲತ್ತು ವಹಿಸಬಾರದು. ಹೊರಗಿನಿಂದ ಯಾರಾದರೂ ವಕಾಲತ್ತು ವಹಿಸಲು ಬಂದರೆ ಅವರಲ್ಲಿಯೂ ಮನವಿ ಮಾಡಲು ಸಂಘದ ಸದಸ್ಯರು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಮಧ್ಯಂತರ ಜಾಮೀನು ಅರ್ಜಿಯಲ್ಲಿ ನಳಿನಿ ಪರ ವಕಾಲತ್ತು ವಹಿಸಿದ್ದ ವಕೀಲ ಪೃಥ್ವಿಕುಮಾರ್ಶೆಟ್ಟಿ ಪ್ರಕರಣದಿಂದ ಹಿಂದೆ ಸರಿದಿರುವುದಾಗಿ ಸಂಘಕ್ಕೆ ಸ್ಪಷ್ಟಪಡಿಸಿದರು.