ಬಲದಿನ್ನಿ- ನಾಲತವಾಡ ಮುಖ್ಯ ರಸ್ತೆಯಲ್ಲಿನ ಬೈಲು ಹನುಮಪ್ಪ ದೇವಸ್ಥಾನ ಪಕ್ಕದಲ್ಲಿರುವ ಸಣ್ಣ ದೇವಸ್ಥಾನದಲ್ಲಿ ನಿಧಿಗಾಗಿ ಗರ್ಭಗುಡಿ ಅಗೆದಿರುವುದು. 
ಜಿಲ್ಲೆ

ನಿಧಿಗಾಗಿ ದೇವಸ್ಥಾನದಲ್ಲಿ ತೆಗ್ಗು ಅಗೆತ

ನಾಲತವಾಡ: ಬಲದಿನ್ನಿ- ನಾಲತವಾಡ ಮುಖ್ಯ ರಸ್ತೆಯಲ್ಲಿನ ಬೈಲು ಹನುಮಪ್ಪ ದೇವಸ್ಥಾನ ಪಕ್ಕದಲ್ಲಿರುವ ಸಣ್ಣ ದೇವಸ್ಥಾನದಲ್ಲಿ ಕಿಡಿಗೇಡಿಗಳು ನಿಧಿ ಆಸೆಗಾಗಿ ದೇವಸ್ಥಾನದ ಒಳಗಿನ ಗರ್ಭಗುಡಿಯಲ್ಲಿ ಗುರುವಾರ ರಾತ್ರಿ ದೊಡ್ಡ ಪ್ರಮಾಣದ ತೆಗ್ಗು ತೆಗೆದಿದ್ದಾರೆ ಎಂದು ಸ್ಥಳೀಯ ಪೋಲಿಸರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಕೂಡ ಬೈಲು ಹನುಮಪ್ಪ ದೇವಸ್ಥಾನದಲ್ಲಿ ಅನೇಕ ಬಾರಿ ನಿಧಿ ಹುಡುಕಾಟದ ಪ್ರಯತ್ನ ನಡೆದಿದೆ. ಪ್ರತಿವರ್ಷ ನಿಧಿ ಆಸೆಗಾಗಿ ಬೈಲು ಹನುಮಪ್ಪ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೆಗ್ಗು ತೋಡುವ ಕಾರ್ಯ ನಡೆಯುತ್ತ ಬಂದಿದೆ.

ಈ ಹಿಂದೆ ಕೂಡ ಬೈಲು ಹನುಮಪ್ಪ ದೇವಸ್ಥಾನದ ಗರ್ಭಗುಡಿಯನ್ನು ತೋಡಲಾಗಿತ್ತು. ನಂತರ ಶಾಸಕ ಸಿ.ಎಸ್.ನಾಡಗೌಡ ಅವರು ದೇವಸ್ಥಾನವನ್ನು ಕಟ್ಟಿಸಿದ್ದರು. ಈ ದೇವಸ್ಥಾನದ ಎದುರು ಇರುವ ರಾಮನ ಗುಡಿಯ ಒಳಗೆ ನಿಧಿ ಹುಡುಗಾಟವನ್ನು ದುಷ್ಕರ್ಮಿಗಳು ನಡೆಸಿದ್ದಾರೆ. ನಿಧಿ ಸಿಕ್ಕಿದೆ ಅಥವಾ ಇಲ್ಲ ಎಂದು ಮಾಹಿತಿ ಇಲ್ಲ.

ಇಂತಹ ಕೃತ್ಯ ಮತ್ತೊಮ್ಮೆ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬೆಳಗ್ಗೆ ಸ್ಥಳಕ್ಕೆ ನಾಲತವಾಡ ಹೊರಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.