ನಾಲತವಾಡ ಪಟ್ಟಣದಲ್ಲಿ ಮುದ್ದೇಬಿಹಾಳ- ಧರ್ಮಸ್ಥಳ ಬಸ್‌ಗೆ ಜನರು ಪೂಜೆ ಸಲ್ಲಿಸಿದರು. ಪೃತ್ವಿರಾಜ್ ನಾಡಗೌಡ, ಶಂಕರಗೌಡ ಪಾಟೀಲ, ಶಿವಲೀಲಾ ಬಸರಕೋಡ, ಆದಪ್ಪ ಗಂಗನಗೌಡರ ಇತರರಿದ್ದರು. 
ಜಿಲ್ಲೆ

ನಾಲತವಾಡದಲ್ಲಿ ಧರ್ಮಸ್ಥಳ ಬಸ್‌ಗೆ ಪೂಜೆ

ನಾಲತವಾಡ: ಪಟ್ಟಣದ ನಾಗರಿಕರ ಬಹುದಿನಗಳ ಬೇಡಿಕೆಯಾದ ಧರ್ಮಸ್ಥಳಕ್ಕೆ ತೆರಳುವ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದೆ.
ಪಟ್ಟಣಕ್ಕೆ ಬಸ್ ಆಗಮಿಸುತ್ತಿದ್ದಂತೆ ಸಂಭ್ರಮಿಸಿದ ಸ್ಥಳಿಯರು ಸಾರಿಗೆ ಇಲಾಖೆಯ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಿದರು.

ಮುದ್ದೇಬಿಹಾಳ ಘಟಕದಿಂದ ಧರ್ಮಸ್ಥಳಕ್ಕೆ ತೆರಳುವ ನೂತನ ಬಸ್ ಸಂಚಾರಕ್ಕೆ ಸ್ಥಳೀಯ ಬಸ್ ನಿಲ್ದಾಣದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಮುದ್ದೇಬಿಹಾಳದಿಂದ ಮಧ್ಯಾಹ್ನ 3.30ಕ್ಕೆ ಬಿಟ್ಟು ನಾಲತವಾಡಕ್ಕೆ 4 ಗಂಟೆಗೆ ಆಗಮಿಸುತ್ತದೆ. ನಂತರ ನಾಲತವಾಡದಿಂದ 4.15ಕ್ಕೆ ಬಿಡುವ ಬಸ್ ಮುದ್ದೇಬಿಹಾಳ ಮೂಲಕ ಧರ್ಮಸ್ಥಳ ಬಾಗಲಕೋಟೆ, ಹುಬ್ಬಳಿ, ಉಡುಪಿ, ಮೂಡಬಿದಿರೆ ಮಾರ್ಗದ ಮೂಲಕ ಮರುದಿನ ಬೆಳಗ್ಗೆ 8ಕ್ಕೆ ಧರ್ಮಸ್ಥಳ ತಲುಪುತ್ತದೆ.

ಬಸ್ ಪೂಜೆ ಮಾಡುವ ವೇಳೆ ಪೃತ್ವಿರಾಜ್ ನಾಡಗೌಡ, ಶಂಕರಗೌಡ ಪಾಟೀಲ, ಶಿವಲೀಲಾ ಬಸರಕೋಡ, ಸ್ಥಳೀಯ ಸಾರಿಗೆ ನಿಯಂತ್ರಕ ಆದಪ್ಪ ಗಂಗನಗೌಡರ, ಬಸವರಾಜ ಹಾವರಗಿ, ಮುತ್ತು ಸ್ಥಾವರಮಠ, ರಜಾಕ್ ನಾಡದಾಳ, ನಿಂಗಪ್ಪ ಕುಳಗೇರಿ, ಬಸವರಾಜ ಕರಿಬಾಯಿ, ದಸ್ತಗೀರಸಾಬ ಆರೇಶಂಕರ, ಇಮಾಮಸಾಬ ತಂಗಡಗಿ, ಮಲ್ಲಿಕಾರ್ಜುನ ಇಳಕಲ್ಲ ಇದ್ದರು.