ಜಿಲ್ಲೆ

ಕೌಶಲ ತರಬೇತಿಯಿಂದ ಸ್ವಾವಲಂಬನೆ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕೌಶಲ ತರಬೇತಿಗಳ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಬಹುದು ಎಂದು

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಸಿ. ಜಗನ್ನಾಥ ಹೇಳಿದರು.

ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ದೇವನಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಲ್‌ಜಲ್ ಮಿತ್ರ ಯೋಜನೆಯಡಿ ನೀರು ವಿತರಣಾ ನಿರ್ವಾಹಕರ ಬಹು ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ಗ್ರಾಮ ಪಂಚಾಯಿತಿಯಿಂದ ಇಬ್ಬರು ಮಹಿಳಾ ಕೌಶಲ ಸದಸ್ಯರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ನೀಡಲಾಗುವುದು ಇಲಾಖೆಯು 28 ದಿನಗಳ ಪ್ರತಿ ಅಭ್ಯರ್ಥಿಗೆ ಶೇ.75ಹಾಜರಾತಿ ಕಡ್ಡಾಯವಾಗಿರುತ್ತದೆ ಹಾಗೂ ಅನೀರಿಕ್ಷಿತ ಭೇಟಿ ನೀಡಲಾಗುತ್ತದೆ. ತರಬೇತಿ ಸಂಸ್ಥೆ ಪ್ರತಿದಿನ ಜಿಪಿಎಸ್ ಮೂಲಕ ಐದು ಛಾಯಚಿತ್ರಗಳನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕಾಗುತ್ತದೆ ಹಾಗೂ ಕೇಂದ್ರ ಕಚೇರಿಯಿಂದ ಧೃಡೀಕರಿಸಿದ ಮೌಲ್ಯಮಾಪನ ಸಂಸ್ಥೆಗಳಿಂದ ಮೌಲ್ಯಮಾಪನ ಕೈಗೊಳ್ಳಲಾಗುತ್ತದೆ. ಎಂದು ತಿಳಿಸಿದರು.

ಪಠ್ಯಕ್ರಮದಂತೆ ತರಬೇತಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಹಾಗೂ ಪಠ್ಯ ಕ್ರಮದ ಪ್ರಕಾರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಡಿ.ನಾಗರಾಜ್ ತಿಳಿಸಿದರು. ತರಬೇತಿ ಕಾರ್ಯಕ್ರಮಕ್ಕೆ ಮೂಲಸೌಕರ್ಯ ಒದಗಿಸಲಾಗಿದೆ ಮತ್ತು ಅನುಮೋದಿತ ಪಠ್ಯಕ್ರಮ ಪಟ್ಟಿಯಂತೆ ತರಬೇತಿ ನೀಡುತ್ತೇವೆ. ಹಾಗೂ ಯಾವುದೇ ಲೋಪ ಕಂಡು ಬರದಂತೆ ಕ್ರಮವಹಿಸಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಸಮಸ್ಯೆ ಪರಿಹಾರಕ್ಕೆ ನಿಯೋಜನೆ: ಜಲಜೀವನ್ ಮಿಷನ್‌ನಡಿ ನಲ್‌ಜಲ್ ಮಿತ್ರ ಕಾರ್ಯಕ್ರಮದಡಿ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗಳಿಗೆ ಕುಡಿಯುವ ನೀರು ಸರಬರಾಜುಗೊಳಿಸುವ ಉಪಕ್ರಮವಾಗಿದ್ದು, ಸ್ಥಳೀಯವಾಗಿ ಉದ್ಬವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ತರಬೇತಿ ಹೊಂದಿದ ತಾಂತ್ರಿಕ ಸಿಬ್ಬಂದಿ ನಿಯೋಜಿಸುವ ಸಲುವಾಗಿ ಕೌಶಲ ತರಬೇತಿ ಹಾಗೂ ಕರ್ತವ್ಯ ನಿರತ ತರಬೇತಿ ನೀಡಲಾಗುತ್ತದೆ ಎಂದು ಗ್ರಾಮೀಣ ಕುಡಿ