ಜಿಲ್ಲೆ

ಕರೊನಾ ವೈರಸ್ ತಡೆಗೆ ಮುಂಜಾಗ್ರತೆ ಅಗತ್ಯ

ನಾಯ್ಕಲ್: ಗ್ರಾಮದ ಡಾ. ಅಂಬೇಡ್ಕರ್ ನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಆದೇಶದಂತೆ ಬಿಸಿಯೂಟದ ಆಹಾರ ಧಾನ್ಯ 1ರಿಂದ 7ನೇ ತರಗತಿ ಮಕ್ಕಳಿಗೆ ಬುಧವಾರ ಬೆಳಗ್ಗೆ ಶಾಲೆಯ ಮುಖ್ಯ ಶಿಕ್ಷಕ ಚಾಂದಾಪಾಶಾ ವಿತರಿಸಿದರು.

ನಂತರ ಮಾತನಾಡಿದ ಅವರು, ಮಕ್ಕಳು ಹಾಗೂ ಪಾಲಕರು ಕರೊನಾ ವೈರಸ್ ತಡೆಗೆ ಮುಂಜಾಗ್ರತೆ ವಹಿಸಬೇಕು. ಇದು ಮಹಾಮಾರಿ ಸಾಂಕ್ರಾಮಿಕ ರೋಗವಾಗಿದ್ದು. ಇದನ್ನು ಹರಡದಂತೆ ಎಚ್ಚರ ವಹಿಸಬೇಕು. ಮುಖಕ್ಕೆ ಕರ ವಸ್ತ್ರ ಹಾಗೂ ಮಾಸ್ಕ್ ಹಾಕಿಕೊಳ್ಳಬೇಕು. ದೇಶದಲ್ಲಿ ಲಾಕ್ಡೌನ್ ಇರುವುದರಿಂದ ಮನೆಯಲ್ಲಿಯೇ ಇರಬೇಕು. ದಿನಸಿ, ಅಗತ್ಯ ವಸ್ತುಗಳನ್ನು ತರಲು ಒಬ್ಬರು ಮಾತ್ರ ಹೊರಗಡೆ ಹೋಗಬೇಕು. ಗುಂಪು ಗುಂಪಾಗಿ ಸೇರದೆ ಅಂತರ ಕಾಯ್ದುಕೊಳ್ಳಬೇಕು. ಮಕ್ಕಳು ಮನೆಯಲ್ಲಿಯೇ ಇದ್ದುಕೊಂಡು ಓದುವುದು, ಬರೆಯುವುದು ಇತರೆ ಚಟುವಟಿಕೆಗಳನ್ನು ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ಬಿಸಿಯೂಟದ ಆಹಾರ ಧ್ಯಾನಗಳಾದ ಅಕ್ಕಿ ಮತ್ತು ಬೆಳೆಗಳನ್ನು ಶಾಲೆಯ ಸುಮಾರು 90 ಕ್ಕೂ ಹೆಚ್ಚು ಮಕ್ಕಳಿಗೆ ಆಹಾರ ಧ್ಯಾನಗಳನ್ನು ವಿತರಿಸಲಾಯಿತು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶೇಖಪ್ಪ ಮುಂದಿನಮನಿ, ಶಿಕ್ಷಕ ಬಸಲಿಂಗಪ್ಪ, ಸಿದ್ರಾಮಪ್ಪ ಭಂಡಾರಿ, ಚಂದ್ರಶೇಖರ ನಾಟೇಕಾರ್, ರಾಮಣ್ಣ ಹಾಗೂ ನಗರದ ನಿವಾಸಿಗಳು, ಮಕ್ಕಳ ಪಾಲಕರು ಸೇರಿದಂತೆ ಇತರರಿದ್ದರು