ಜಿಲ್ಲೆ

ನವಲಗುಂದ ನಾಗಸ್ವಾಮಿ ರಥೋತ್ಸವ

Dharwada - Basavaraj Idli

ಹುಬ್ಬಳ್ಳಿ: ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಶ್ರೀ ನಾಗಸ್ವಾಮಿ ರಥೋತ್ಸವ ಆ. 9ರಂದು ಸಂಭ್ರಮದಿಂದ ನಡೆಯಲಿದೆ.

ವಿಷ ಜಂತುಗಳು ಕಚ್ಚಿದವರು ತಕ್ಷಣ ಆಗಮಿಸಿ ಇಲ್ಲಿನ ನಾಗಸ್ವಾಮಿ ಆರಾಧನೆ ಮಾಡಿದರೆ ಭಾದೆಯಿಂದ ಮುಕ್ತರಾಗುತ್ತಾರೆಂಬ ನಂಬಿಕೆ ಭಕ್ತರಲ್ಲಿದೆ.

ನವಲಗುಂದದ ಅಮರಗೋಳ ಸುತ್ತಲಿನ ಪ್ರದೇಶ ವಿಷಜಂತುಗಳ ಆಶ್ರಯವಾಗಿದ್ದನ್ನು ಅರಿತ ಸಂತರು ಆಶ್ರಮದ ಹತ್ತಿರವೇ ಗದ್ದುಗೆ ನಿರ್ಮಿಸಿ ಬೆಣ್ಣೆ ಹಳ್ಳದ ನೀರಿಗೆ ತೀರ್ಥ ಸ್ವರೂಪ ನೀಡಿ ಭಕ್ತರ ಭಯ ನಿವಾರಿಸಿದರೆಂಬ ಪ್ರತೀತಿ ಇದೆ. ಅಂದಿನಿಂದ ಭಕ್ತರು ನಾಗಸ್ವಾಮಿ ಮಠವೆಂದು ಇದನ್ನು ಕರೆಯುತ್ತಾರೆ.

ಪ್ರತಿ ವರ್ಷದಂತೆ ಆ. 9ರಂದು ಬೆಳಗ್ಗೆಯಿಂದ ನಾಗಸ್ವಾಮಿ ಪೂಜೆ, ಆರಾಧನೆ ನಡೆಯುತ್ತದೆ. ಸಂಜೆ 5.30ಕ್ಕೆ ರಥೋತ್ಸವ ನಡೆಯಲಿದೆ. ಭಕ್ತರು ಪಾಲ್ಗೊಳ್ಳಬೇಕೆಂದು ವಿಜಯೇಂದ್ರ ಪಾಟೀಲ ಅವರು ಕೋರಿದ್ದಾರೆ.