ಜಿಲ್ಲೆ

ಅಭಿವೃದ್ಧಿ ಪರ ಚಿಂತನೆಯೊಂದಿಗೆ ಮಂಗಳಮುಖಿ ದೀಕ್ಷಾ ಸ್ಪರ್ಧೆ

reportermys

ಮಡಿಕೇರಿ: ಅಭಿವೃದ್ಧಿ ಪರ ಚಿಂತನೆಯೊಂದಿಗೆ ಮಡಿಕೇರಿ ನಗರಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ವಾರ್ಡ್‌ನ ಮತದಾರರು ಮತ ನೀಡಿ ವಿಜಯಶಾಲಿಯನ್ನಾಗಿಸುವಂತೆ ಅಭ್ಯರ್ಥಿ ದೀಕ್ಷಾ ಮನವಿ ಮಾಡಿದರು.
ಸಮಾಜದ ಅವಗಣನೆಗೆ ಒಳಗಾಗಿರುವ ಮಂಗಳಮುಖಿ ಸಮೂಹ ಸಮಾಜಮುಖಿ ಚಿಂತನೆಗಳೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳಬೇಕು ಎನ್ನುವ ನಿರೀಕ್ಷೆಯೊಂದಿಗೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ವಾರ್ಡ್‌ನ ಜನತೆಯ ಬೆಂಬಲವೂ ತನಗಿದೆ. ವಾರ್ಡ್‌ನಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ನಾನು ಗೆದ್ದರೆ ಅಭಿವೃದ್ಧಿ ಕಾರ್ಯಗಳ ಮೂಲಕ ೨೧ ನೇ ವಾರ್ಡ್‌ನ್ನು ಮಾದರಿ ವಾರ್ಡ್‌ನ್ನಾಗಿ ಪರಿವರ್ತಿಸುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸತೀಶ್‌ಪೈ, ಸತ್ಯ ಇದ್ದರು.