ಜಿಲ್ಲೆ

ಸಿಹಿನೀರು ಹೊಂಡದ ಮನೆಗಳಿಗೆ ಶಾಂತಿ ಸಾಗರದ ನೀರು

Chitradurga

ಚಿತ್ರದುರ್ಗ:ನಗರದ ಸಿಹಿನೀರು ಹೊಂಡದ ಮೇಲಿನ ಭಾಗದ 200 ಮನೆಗಳಿಗೆ 20 ದಿನದೊಳಗೆ ಶಾಂತಿ ಸಾಗರದಿಂದ ನೇರವಾಗಿ ನೀರು ಸರಬ ರಾಜು ಆಗಲಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಹೊಂಡದ ಬಳಿ ಭಾನುವಾರ ಹೈ ಮಾಸ್ಟ್ ದೀಪ ಉದ್ಘಾಟನೆ ಮತ್ತು ಕೊಳವೆ ಬಾವಿ ಕೊರೆಸಲು ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಿಹಿ ನೀರು ಹೊಂಡದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರು,ರಸ್ತೆ,ಬೀದಿ ದೀಪ,ಹಕ್ಕ ಪತ್ರದ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದರು.

ಹಲವರಿಗೆ ಹಕ್ಕು ಪತ್ರ ನೀಡಿಲ್ಲವೆಂದು ತಿಳಿಸಿದ್ದಾರೆ. ಸಮೀಕ್ಷೆ ನಡೆಸಿ ಹಕ್ಕು ಪತ್ರ ವಿತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀ ತು ಮಾಡಿದರು. ಕುಡಾದಿಂದ ಹೈ ಮಾಸ್ಟ್ ದೀಪ ಅಳವಡಿಸಿರುವುದರಿಂದ ಈ ಭಾಗದ ನಿವಾಸಿಗಳಿಗೆ ಅನುಕೂಲವಾಗಲಿದೆ. ನೀರಿನ ಸಂಪರ್ಕ ಕಲ್ಪಿಸಿದ ನಂತರ ಸಿಸಿ ರಸ್ತೆ ನಿರ್ಮಿಸುವುದಾಗಿ ಹೇಳಿದರು.

ಕುಡಾ ಅಧ್ಯಕ್ಷ ಸಿದ್ದಾಪುರ ಸುರೇಶ್,ಆಯುಕ್ತ ಸೋಮಶೇಖರ್,ನಗರಸಭೆ ಉಪಾಧ್ಯಕ್ಷೆ ಮಂಜುಳಾ ವೇದಾ,ಪ್ರಭಾರ ಆಯುಕ್ತ ವಾ ಸಿಂ,ಸದಸ್ಯರಾದ ಹರೀಶ್,ವೆಂಕಟೇಶ್,ಶ್ರೀನಿವಾಸ್,ಶ್ವೇತಾ ವೀರೇಶ್,ಮುಖಂಡರಾದ ಪರಮೇಶ್,ಪಾಪಣ್ಣ,ಶಿವಕುಮಾರ್,ನಾಗ ರಾ ಜ್,ಲೋಕೇಶ್ ಮತ್ತಿತರರು ಇದ್ದರು.

-----