ಕಡೂರು ಶ್ರೀ ಗಣೇಶಮಹೋತ್ಸವ ಸಮಿತಿ ನೂತನ ಅಧ್ಯಕ್ಷ ಹೂವಿನ ಮಂಡಿ ನಾಗರಾಜ್ ಅವರನ್ನು ಸದಸ್ಯರು ಅಭಿನಂದಿಸಿದರು. ಮಾಜಿ ಅಧ್ಯಕ್ಷ ಎನ್.ಎಚ್.ನಂಜುಂಡಸ್ವಾಮಿ, ಕೆ.ಜಿ.ಪ್ರಹ್ಲಾದ್, ಕೆ.ಬಿ.ಸೋಮೇಶ್, ಕೆ.ಜಿ.ಲೋಕೇಶ್ವರ್, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಜಿ.ಟಿ.ಬಸವರಾಜ್, ಕೆ.ಜಿಕೃಷ್ಣಮೂರ್ತಿ ಇತರರಿದ್ದರು. 
ಜಿಲ್ಲೆ

ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಗೆ ನಾಗರಾಜ್ ಅಧ್ಯಕ್ಷ

ಡೂರು: ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ 38ನೇ ವರ್ಷದ 2024-25ನೇ ಸಾಲಿನ ಸಮಿತಿ ಅಧ್ಯಕ್ಷರಾಗಿ ಹೂವಿನ ಮಂಡಿ ನಾಗರಾಜ್ ನೇಮಕವಾದರು.

ಪೆಂಡಾಲ್ ಆವರಣದಲ್ಲಿ ಬುಧವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ 2023-24ನೇ ಸಾಲಿನ ಸಮಿತಿ ಅಧ್ಯಕ್ಷ ಎನ್.ಎಚ್. ನಂಜುಂಡಸ್ವಾಮಿ ಅವರು ಗಣೇಶ ಮಹೋತ್ಸವದ ಲೆಕ್ಕಪತ್ರ ಮಂಡನೆ ಮಾಡಿದರು. ಬಳಿಕ ಸಮಿತಿ ಅಧ್ಯಕ್ಷರ ನೇಮಕ ಮಾಡಲಾಯಿತು.
ನೂತನ ಅಧ್ಯಕ್ಷ ಹೂವಿನ ಮಂಡಿ ಕೆ.ಎಂ.ನಾಗರಾಜ್ ಮಾತನಾಡಿ, ಈ ವರ್ಷವೂ ಒಂದು ತಿಂಗಳು ಗಣೇಶೋತ್ಸವ ಆಚರಿಸಲಾಗುವುದು. ಸಮಿತಿ ಸದಸ್ಯರನ್ನು ವಿಶ್ವಾಸದೊಂದಿಗೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ದೇವರ ಸೇವೆಗೆ ಪಟ್ಟಣದ ನಾಗರಿಕರ ಸಹಕಾರ ಅಗತ್ಯ ಎಂದರು.
ಸಮಿತಿ ಪದಾಧಿಕಾರಿಗಳಾದ ಕೆ.ಜಿ.ಪ್ರಹ್ಲಾದ್, ಕೆ.ಬಿ.ಸೋಮೇಶ್, ಟಿ.ರಂಗಪ್ಪ, ಕೆ.ಜಿ.ಲೋಕೇಶ್ವರ್, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಜಿ.ಟಿ.ಬಸವರಾಜ್, ಕೆ.ಜಿ.ಕೃಷ್ಣಮೂರ್ತಿ, ಎನ್.ಎಚ್.ಚಂದ್ರಪ್ಪ, ಜಯಣ್ಣ, ಸೋಮಶೇಖರ್, ಭಿಮ್ಲಾಜೀ, ಹೊಳೆಯಪ್ಪ, ದೀಪು ಹೊಳೆಯಪ್ಪ, ತಿಪ್ಪೇಶ್ ದಳವಾಯಿ ಇತರರಿದ್ದರು.