ತಿಕೋಟಾದಲ್ಲಿ ಮಹಿಳೆಯರು ಸಂಭ್ರಮದಿಂದ ನಾಗ ದೇವರಿಗೆ ಹಾಳೆರೆದರು. ಯಲವ್ವ ತಳವಾರ ಇತರರಿದ್ದರು. 
ಜಿಲ್ಲೆ

ತಿಕೋಟಾದಲ್ಲಿ ಸಂಭ್ರಮದ ನಾಗರ ಪಂಚಮಿ

ತಿಕೋಟಾ: ಪಟ್ಟಣದ ಬನಶಂಕರಿ ದೇವಸ್ಥಾನ ಹತ್ತಿರ ಬಾವಿಕಟ್ಟಿಯಲ್ಲಿ ಸೋಮವಾರ ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು. ಬಹುತೇಕ ಕುಟುಂಬದವರು ಭಾನುವಾರ ಮನೆಯಲ್ಲಿಯೇ ನಾಗರ ಮೂರ್ತಿಗೆ ವಿಶೇಷ ಪೂಜೆ ಮಾಡಿ ಹಾಲೆರೆದರು.

ಸ್ಥಳೀಯ ಬಾವಿಕಟ್ಟಿಯಲ್ಲಿ ಸ್ಥಾಪನೆ ಮಾಡಿದ ನಾಗರ ಮೂರ್ತಿಗೆ ಮಹಿಳೆಯರು ಸೋಮವಾರ ಹಾಲೆರೆದು ನಮಿಸಿದರು. ನಾಗದೇವನ ಪೂಜೆ ಕಾರ್ಯದ ನೇತೃತ್ವವನ್ನು ಯಲವ್ವ ರಾಮು ತಳವಾರ ವಹಿಸಿಕೊಂಡಿದ್ದರು.

ಶೇಂಗಾ, ಪುಟಾಣಿ, ಕೊಬ್ಬರಿ ಉಚಿಡಿ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದರು.