ವಿಜಯವಾಣಿ ಸುದ್ದಿಜಾಲ ಗದಗ
ನಾಗರ ಪಂಚಮಿ ನಿಮತ್ಯ ನಗರದ ಹಾತಲಗೇರಿ ರಸ್ತೆಯಲ್ಲಿರುವ ನಿಸರ್ಗ ಬಡಾವಣೆಯಲ್ಲಿನ ನಾಗದೇವತೆ ದೇವಸ್ಥಾನದಲ್ಲಿ ಮಹಿಳೆಯರು ಹಾಲು ಎರೆಯುವ ಮೂಲಕ ಪಂಚಮಿ ಹಬ್ಬ ಆಚರಿಸಿದರು. ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ಜರುಗಿತು.
ನಾಗದೇವತೆ ಮಂದಿರದ ಕಮೀಟಿಯ ಅಧ್ಯ ಕೇಶವರಾಮ್ ಕೊಳ್ಳಿ ಮಾತನಾಡಿ, ನಿಸರ್ಗ ಬಡಾವಣೆಯಲ್ಲಿ ಈ ನಾಗಪ್ಪನ ಕಟ್ಟೆ ನಿಮಿರ್ಸಿ ನಮ್ಮ ನಿಸರ್ಗ ಬಡಾವಣೆಯ ಮಹಿಳೆಯರಿಗೆ ಗಣಪತಿಯನ್ನು ಹಾಗೂ ನಾಗದೇವತೆಯನ್ನು ಆರಾಧಿಸಲು ನಮ್ಮ ಟ್ರಸ್ಟ್ ಕಮೀಟಿಯಿಂದ ದೇವಸ್ಥಾನಕ್ಕೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುತ್ತಿದ್ದೇವೆ. ಸುಮಂಗಲೆಯರು ಈ ಹಬ್ಬವನ್ನು ಸಡಗರ, ಸಂಭ್ರಮ ವಿಜೃಂಭಣೆಯಿಂದ ದೇವಸ್ಥಾನದಲ್ಲಿ ಪೂಜೆ, ಪ್ರವಚನಗಳ ಮೂಲಕ ನೆರವೇರತ್ತಿರುವದು ಸಂತಸ ತಂದಿದೆ ಎಂದರು.
ರಾಜೇಂದ್ರ ಪಾಟೀಲ, ವಿ.ಎಂ. ಹಾದಿಮನಿ, ಗುರುಪಾದಯ್ಯ ಸಾಲಿಮಠ, ಎಸ್.ಎನ್. ಮಡಿವಾಳರ, ಗುರುರಾಜ ವಸ್ತ್ರದ, ವೈ.ಎಂ. ಹಂಪಣ್ಣವರ, ಪುಷ್ಪಾ ಹಾದಿಮನಿ, ಪ್ರೀತಿ ಮಳ್ಳಿಮಠ, ಸಂಗೀತ ಮೆರವಾಡೆ, ದೀಪಾ ದೇಸಾಯಿ, ಶಶಿರೇಖಾ, ಶಿಲ್ಪಾ, ಸುನಂದಾ ಪಾಟೀಲ, ಶ್ರೀದೇವಿ ಹಿರೇಮಠ, ಗಂಗಮ್ಮ ಮಡಿವಾಳರ, ಜಯಶ್ರೀ ಪಾಟೀಲ, ಸರ್ವಮಂಗಲ ಸಾಲಿಮಠ ಇತರರು ಇದ್ದರು.