ನಾಗಪಂಚಮಿ ಹಬ್ಬದ ಅಂಗವಾಗಿ ಹೂವಿನಹಡಗಲಿಯ ಗೋಣಿಬಸವೇಶ್ವರ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ ಮಾಡಿದರು. 
ಜಿಲ್ಲೆ

ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಹೂವಿನಹಡಗಲಿ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನರು ನಾಗರ ಮೂರ್ತಿಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮದಿಂದ ನಾಗಪಂಚಮಿ ಹಬ್ಬ ಆಚರಿಸಿದರು.ಬೆಳಗ್ಗೆಯಿಂದಲೇ ಭಕ್ತರು ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ನಾಗ ಮೂರ್ತಿಗಳಿಗೆ ಹಾಲೆರೆದರು.

ದೇವರಿಗೆ ಸಿಹಿ ಖಾದ್ಯ ಅರ್ಪಣೆ

ಮನೆಯಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ದೇವಸ್ಥಾನಗಳಿಗೆ ತೆರಳಿ ನಾಗರ ಮೂರ್ತಿಗಳಿಗೆ ಹಾಲಿನ ಅಭಿಷೇಕ ಹಾಗೂ ಸಿಹಿ ಖಾದ್ಯಗಳನ್ನು ಅರ್ಪಿಸಿದರು. ಇನ್ನು ನಾಗರ ಪಂಚಮಿ ಹಬ್ಬದ ಅಂಗವಾಗಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ವಿವಿಧ ಬಗೆಯ ಗ್ರಾಮೀಣ ಕ್ರೀಡೆಗಳಾದ ನಿಂಬೆಹಣ್ಣು ಎಸೆತ, ಗೋಣಿಚೀಲ ಓಟ ಸೇರಿದಂತೆ ಇತರ ಕ್ರೀಡೆಗಳಲ್ಲಿ ಯುವಕರು ಭಾಗವಹಿಸಿ ಸಂಭ್ರಮಿಸಿದರು. ಚಿಣ್ಣರು ಮತ್ತು ಮಹಿಳೆಯರು ಜೋಕಾಲಿ ಆಡುತ್ತಿರುವುದು ಕಂಡುಬಂತು.