ಜಿಲ್ಲೆ

ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಅರ್ಥಪೂರ್ಣ ನಾಗಪೂಜೆ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ನಾಗಪಂಚಮಿ ದಿನದ ಅಂಗವಾಗಿ ಇಲ್ಲಿನ ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸದ್ಗುರು ನೇತೃತ್ವದಲ್ಲಿ ಶುಕ್ರವಾರ ನಾಗಪೂಜೆ ಮತ್ತು ಸಾಂಸತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಕೈಗೊಳ್ಳಲಾಯಿತು. ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ ಸೇರಿದಂತೆ ಹಲವರು ಇಲ್ಲಿನ ನಾಗಮಂಟಪ ಕೇಂದ್ರದಲ್ಲಿನ ನಾಗರ ಕಲ್ಲುಗಳಿಗೆ ಬೆಣ್ಣೆ ಸೇವೆ ಸಮರ್ಪಿಸಿ, ಹರಕೆಗಳನ್ನು ಹೊತ್ತರು.

ಸುಮಂಗಲಿಯರು ಕಲಶಗಳನ್ನು ಹೊತ್ತು ಸಾಗಿ ಬರುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಾಗನಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರವನ್ನು ಕೈಗೊಳ್ಳಲಾಯಿತು. ಖ್ಯಾತ ಭಜನಾ ತಂಡಗಳ ಕಲಾವಿದರಿಂದ ವಾದ್ಯಗಳೊಂದಿಗೆ ನಾಗದೇವನ ಆರಾಧಿಸುವ ಗೀತೆಗಳ ಗಾಯನವು ಮೆಚ್ಚುಗೆಗೆ ಪಾತ್ರವಾಯಿತು. ಪ್ರವಚನ ನೀಡಿದ ಸದ್ಗುರು, ಮನುಷ್ಯನಿಗೆ ಮಾತ್ರವಲ್ಲ ಇಡೀ ಜೀವಸಂಕುಲವನ್ನು ಆರಾಧಿಸುವ ಸಂಸತಿ ನಮ್ಮದು. ಇಲ್ಲಿನ ಕಲೆ ಮತ್ತು ಸಂಪ್ರದಾಯಗಳು, ಆಧ್ಯಾತ್ಮಿಕ ಚಿಂತನೆಗಳು ಸಕಾರಾತ್ಮಕ ಶಕ್ತಿಯನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ನಾಗನು ಪ್ರಕೃತಿ ಆರಾಧ್ಯ ದೈವ. ಈತನಿಗಾಗಿ ನಾಗಪಂಚಮಿಯ ವಿಶೇಷ ದಿನವನ್ನು ಮೀಸಲಿಡಲಾಗಿದೆ ಎಂದರು.

*ಮೂರು ದಿನಗಳ ಜಾತ್ರೆ

ನಾಗಪಂಚಮಿ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ಸಂಭ್ರಮೋತ್ಸವಕ್ಕೆ ಶುಕ್ರವಾರ ಸದ್ಗುರು ಚಾಲನೆ ನೀಡಿದರು.

ಆದಿಯೋಗಿ ಧ್ಯಾನ ಕೇಂದ್ರದ ಸುತ್ತಲಿನ 5 ಹಳ್ಳಿಗಳ ಜನರು ಹಾಲನ್ನು ತಂದು ನಾಗನಿಗೆ ಸಮರ್ಪಿಸಿದರು. ಹಾಗೆಯೇ ಭಕ್ತ ಸಮೂಹವು ಬೆಣ್ಣೆ, ಅರಿಶಿನವನ್ನು ಲೇಪಿಸಿತು. ನಾಗರ ಪಂಚಮಿ ದೀಪ ಅರ್ಪಣೆ, ನಾಗರ ಪಂಚಮಿ ಕಾಕೋರ್ಟಕ ಅರ್ಪಣೆ, ನಾಗರ ಪಂಚಮಿ ಸರ್ಪ ಸೇವೆ ಮತ್ತು ನಾಗ ದೋಷ ನಿವಾರಣಾ ಕಾರ್ಯಗಳು ನಡೆದವು.