ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ನಾಗಾನುಗ್ರಹ ಪ್ರಶಸ್ತಿ ಪ್ರದಾನಿಸಿದರು.  
ಜಿಲ್ಲೆ

ನಾಗಾನುಗ್ರಹ ಪ್ರಶಸ್ತಿ ಪ್ರದಾನ

ಇಂದಿರಾ ಎನ್ ಕೆ

ಬೈಂದೂರು: ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದಲ್ಲಿ ಶುಕ್ರವಾರ ನಾಗದೇವರಿಗೆ ವಿಶೇಷ ಪೂಜೆ ಹಾಗೂ 9ನೇ ವರ್ಷದ ನಾಗಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಉಪ್ಪುಂದ ರಾಘವೇಂದ್ರಸ್ವಾಮಿ ಮಠದ ವಿಚಾರಣಾಕರ್ತ ಸುಭಾಶ್ಚಂದ್ರ ಪುರಾಣಿಕ ಸಮಾರಂಭ ಉದ್ಘಾಟಿಸಿದರು. ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಪ್ರಶಸ್ತಿ ಪ್ರದಾನಿಸಿದರು.

ವಾಸ್ತುತಜ್ಞ, ಯಕ್ಷಗಾನ ಪ್ರಸಂಗಕರ್ತ ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಧರ್ಮದರ್ಶಿ ತಿಮ್ಮ ವಿ.ದೇವಾಡಿಗ ಪ್ರಸ್ತಾವಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಮಾಜಿ ಸದಸ್ಯ ಎಸ್.ಮದನ್‌ಕುಮಾರ್ ಉಪ್ಪುಂದ, ರಂಗೋಲಿ ಕಲಾವಿದೆ ಡಾ.ಭಾರತಿ ಮರವಂತೆ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಸಿ.ಎಸ್.ಖಾರ್ವಿ ಕೊಡೇರಿ ಸ್ವಾಗತಿಸಿದರು. ಕೆರ್ಗಾಲ್ ಬನಗಲ್‌ಹಾಡಿ ವನದುರ್ಗಾ ದೇವಿ ದೇವಸ್ಥಾನ ಕಾರ್ಯದರ್ಶಿ ಗೋವಿಂದ ಎಂ.ಮಟ್ನಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದೇವರಾಜ್ ಮರವಂತೆ ಭಾಗವತ ಬಳಗ ವತಿಯಿಂದ ವಾಲಿಮೋಕ್ಷ ಯಕ್ಷಗಾನ ಪ್ರಸಂಗ ತಾಳಮದ್ದಳೆ ನಡೆಯಿತು.