ಬೆಂಗಳೂರು: ಕರ್ನಾಟಕ ಲೇಖಕಿಯರ ಸಂ ನೀಡುವ 2024ನೇ ಸಾಲಿನ ಎಸ್. ನಾಗಮಣಿ ರಾವ್ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಎಚ್.ಎಲ್. ಸೀತಾದೇವಿ ಭಾಜನರಾಗಿದ್ದಾರೆ.
ಆ.11ರಂದು ಬಸವನಗುಡಿಯ ಅಬಲಾಶ್ರಮ ವೇದಿಕೆಯಲ್ಲಿ ಆಯೋಜಿಲಾಗುವ ಸಮಾರಂಭದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯೆ ಆಯೇಷಾ ಖಾನಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿರಲಿದೆ. ಪತ್ರಕರ್ತೆ ಸಿ.ಜಿ. ಮಂಜುಳಾ 'ಮಹಿಳೆ: ಪತ್ರಿಕೋದ್ಯಮ ಮತ್ತು ಸೃಜನಶೀಲ ಸಾಹಿತ್ಯ' ಕುರಿತು ಉಪನ್ಯಾಸ ಮಾಡಲಿದ್ದಾರೆ.