ಸಂಡೂರು ತಾಲೂಕು ತೋರಣಗಲ್ ಜೆಎಸ್‌ಡಬ್ಲು ೃಗೆ ಆಗಮಿಸಿದ ನಾಗಾಲ್ಯಾಂಡ್ ಸಿಎಂ ನೇಫಿಯು ರಿಯೋ ಅವರನ್ನು ಜೆಎಸ್‌ಡಬ್ಲು ್ಯ ಫೌಂಡೇಷನ್ ಸಿಎಸ್‌ಆರ್ ದಕ್ಷಿಣ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಸ್ವಾಗತಿಸಿದರು. ಜೆಎಸ್‌ಡಬ್ಲು ್ಯ ಸ್ಟೀಲ್‌ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಬಿಪಿಒ ಮುಖ್ಯಸ್ಥ ರಾಹುಲ್ ಇದ್ದರು. 
ಜಿಲ್ಲೆ

ನಾಗಾಲ್ಯಾಂಡ್ ಸಮೃದ್ಧ ನಾಡಾಗಿಸಲು ಪಣ

Kopala - Desk - Eraveni

ಸಂಡೂರು: ಜೆಎಸ್‌ಡಬ್ಲು ್ಯ ಉತ್ಪಾದನೆ ಮತ್ತು ವ್ಯಾಪಾರದ ಜತೆಗೆ ಸುತ್ತಲಿನ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ನೇಫಿಯು ರಿಯೋ ಹೇಳಿದರು.

ತಾಲೂಕಿನ ಜಿಂದಾಲ್‌ನ ಒಪಿಜೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಬಿಪಿಒ, ಜೆಎಸ್‌ಡಬ್ಲು ಶಕ್ತಿ, ಸಖಿ ಮತ್ತು ಬುಂಕೈ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳಾದ ಉತ್ತರ ಕರ್ನಾಟಕದ ಅತಿದೊಡ್ಡ ಮಹಿಳಾ ಬಿಪಿಒ, ಸುರಕ್ಷತಾ ಕೇಂದ್ರ ವೀಕ್ಷಣೆ ಮಾಡಲಾಗಿದೆ.

ಈ ಭೇಟಿ ಮೂಲ ಉದ್ದೇಶ ವಿವಿಧ ಸಂಸ್ಕೃತಿ, ಕಲೆ ಮತ್ತು ಪರಂಪರೆ ನಾಡಾದ ನಾಗಾಲ್ಯಾಂಡ್ ಸಮಗ್ರ ಅಭಿವೃದ್ಧಿ ಮಾಡುವಲ್ಲಿ ಯೋಜನೆ ರೂಪಿಸುವುದಾಗಿದೆ. ಈಗಾಗಲೇ ಸಾಕ್ಷರತೆ, ಲಿಂಗ ಸಮಾನತೆ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಅನೇಕ ಸವಾಲುಗಳ ನಡುವೆ ಸಮೃದ್ಧ ನಾಗಾಲ್ಯಾಂಡ್ ಅನ್ನು ರೂಪಿಸುವುದೇ ನಮ್ಮ ಯೋಜನೆಯಾಗಿದೆ ಇದಕ್ಕೆ ಮುಂದಿನ ದಿನಗಳಲ್ಲಿ ಜೆಎಸ್‌ಡಬ್ಲು ್ಯ ಬೆಂಬಲ ನೀಡಲಿದೆ ಎಂದರು.

ಬಿಪಿಒ ಮುಖ್ಯಸ್ಥ ರಾಹುಲ್ ಈಗಾಗಲೇ ನಾಗಾಲ್ಯಾಂಡ್‌ನಲ್ಲಿ ಜೆಎಸ್‌ಡಬ್ಲು ್ಯನಿಂದ ಬಿಪಿಒ ಸ್ಥಾಪನೆ ಮಾಡುತ್ತಿರುವ ನೀಲಿ ನಕ್ಷೆ ಕುರಿತು ವಿವರಿಸಿದರು. ಜೆಎಸ್‌ಡಬ್ಲು ್ಯ ಫೌಂಡೇಷನ್ ಸಿಎಸ್‌ಆರ್ ದಕ್ಷಿಣ ವಿಭಾಗದ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ಇತರರಿದ್ದರು.