ಅಥಣಿ: ಪಟ್ಟಣದ ಶಿವಯೋಗಿ ವೃತ್ತದ ಸಿದ್ದೇಶ್ವರ ದೇವಸ್ಥಾನದ ಹತ್ತಿರವಿರುವ ನಾಗದೇವರ ಜಾತ್ರಾಮಹೋತ್ಸವ ಶುಕ್ರವಾರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ದೇವರಿಗೆ ಮಹಾ ರುದ್ರಾಭಿಷೇಕ ಜರುಗಿತು. ಸಾವಿರಾರು ಸುಮಂಗಲೆಯರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿ ನಾಗದೇವರಿಗೆ ಹಾಲೆರೆದರು. ಬಳಿಕ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ರಾತ್ರಿ ಕಿರ್ತನೆ ಮತ್ತು ಜಾನಪದ ಗೀತಗಾಯನ ಜರುಗಲಿದೆ.